ಮಲೇಬೆನ್ನೂರು, ಸೆ.9- ಜಿಗಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಜಿ.ನಾಗೇಶ್ ಅವರು ಮೊನ್ನೆ ಸೇವೆಯಿಂದ ವಯೋನಿವೃತ್ತಿ ಹೊಂದಿದರು.
ಈ ನಿಮಿತ್ಯ ಗ್ರಾಮದ ಶ್ರೀ ಮಹೇಶ್ವರ ಸಮುದಾಯ ಭವನದಲ್ಲಿ ಎಸ್‌ಡಿಎಂಸಿ, ಶಿಕ್ಷಕ ವರ್ಗ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂ ಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿ.ನಾಗೇಶ್ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಮಾತನಾಡಿ, ಶಿಕ್ಷಕ ವೃತ್ತಿ ಸಮಾಜದಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ನಾವು ಯಾವ ರೀತಿ ನಮ್ಮನ್ನು ನಾವು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆಯೇ ಆ ರೀತಿ ನಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಎಂದು ಉದಾಹರಣೆಯೊಂದಿಗೆ ತಿಳಿಸಿದರು.
ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರಚಾರಿ ಅಧ್ಯಕ್ಷತೆ ವಹಿಸಿದ್ದರು.
ಎನ್‌ಪಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣನವರ್, ಬಿಆರ್‌ಪಿ ಚನ್ನವೀರಯ್ಯ ಹಿರೇಮಠ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಅಶೋಕ್ ಬಿ.ವಾಜಂತ್ರಿ, ದಂಡಿ ತಿಪ್ಪೇಸ್ವಾಮಿ, ಬಸವರಾಜ್ ಗುಂಡಣ್ಣನವರ್, ಮಂಜಪ್ಪ ಬಿದರಿ, ಶ್ರೀಮತಿ ಸುಧಾ, ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣಕುಮಾರ್ ಹೆಗಡೆ, ಗ್ರಾಮದ ಮುಖಂಡರಾದ ಜಿ.ಆನಂದಪ್ಪ, ಗೌಡ್ರ ಬಸವರಾಜಪ್ಪ, ಬಿ.ಎಂ.ದೇವೇಂದ್ರಪ್ಪ, ಕೆ.ಎಸ್.ನಂದ್ಯಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಡಾ.ಎನ್.ನಾಗರಾಜ್, ಜಿ.ಪಿ.ಹನುಮಗೌಡ, ಎಕ್ಕೆಗೊಂದಿ ರುದ್ರಗೌಡ, ನಿವೃತ್ತ ಶಿಕ್ಷಕರಾದ ಡಿ.ರವೀಂದ್ರಪ್ಪ, ಬಿ.ರವೀಂದ್ರಚಾರಿ, ಪತ್ರಕರ್ತ ಪ್ರಕಾಶ್ ಅವರುಗಳು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ನಾಗೇಶ್ ಅವರು, ಬಿ.ಎ ಶಿಕ್ಷಕರ ತರಬೇತಿ ಪಡೆದ ನಾನು, 1992 ರಿಂದ 98 ರವರೆಗೆ 6 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನಂತರ 1998ರಲ್ಲಿ ಶಿಕ್ಷಕ ಇಲಾಖೆಗೆ ಸೇರ್ಪಡೆಯಾಗಿದ್ದೇನೆ ಎಂದರು.
2003ರ ಜೂನ್‌ನಿಂದ ಇಲ್ಲಿಯ ತನಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕನಾಗಿ ಎಲ್‌ಕೆಜಿ ಮತ್ತು ಯುಕೆಜಿಯನ್ನು ವ್ಯವಸ್ಥಿತವಾಗಿ ಪ್ರಾರಂಭಿಸಿದ ತೃಪ್ತಿ ನನಗಿದೆ. ಪೊಲೀಸ್ ವೃತ್ತಿಗಿಂತ ಶಿಕ್ಷಕ ವೃತ್ತಿ ನನಗೆ ಹೆಚ್ಚು ಗೌರವ ಮತ್ತು ಸಾರ್ಥಕತೆ ತಂದು ಕೊಟ್ಟಿದೆ. ನನ್ನ ಮೂವರ ಮಕ್ಕಳ ಪೈಕಿ ಒಬ್ಬರು ಶಿಕ್ಷಕರಾಗಿದ್ದಾರೆ. ಇನ್ನೊಬ್ಬ ಪೊಲೀಸ್, ಮತ್ತೊಬ್ಬ ಇಂಜಿನಿಯರ್ ಆಗಿದ್ದಾರೆ ಎಂದು ನಾಗೇಶ್ ತಿಳಿಸಿದರು.
ಗ್ರಾ.ಪಂ. ಉಪಾಧ್ಯಕ್ಷ ಡಿ.ಎಂ.ಹರೀಶ್, ಎಲ್‌ಕೆಜಿ, ಯುಕೆಜಿ ಅಧ್ಯಕ್ಷ ಕೆ.ಎಸ್.ಮಾಲತೇಶ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಮಂಜುಳಾ ಮಾಲತೇಶ್ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮದ ನಾಗರಸನಹಳ್ಳಿ ಮಹೇಶ್ವರಪ್ಪ, ಮುದ್ದಪ್ಳ ಶಂಕ್ರಪ್ಪ, ನಿವೃತ್ತ ಶಿಕ್ಷಕ ಜಿ.ಆರ್.ನಾಗರಾಜ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಎಂ.ಆರ್.ನಾಗರಾಜ್, ಬಿ.ಪ್ರಭಾಕರ್, ಜಿ.ಆರ್.ಚಂದ್ರಪ್ಪ, ಡಿ.ಪಿ.ಚಿದಾನಂದ್, ಟಿ.ಗದಿಗೆಪ್ಪ, ವಿಜಯಬಾಸ್ಕರ್, ಶಾಲಾ ಶಿಕ್ಷಕರಾದ ಲಿಂಗರಾಜ್, ಗುಡ್ಡಪ್ಪ, ಮಲ್ಲಿಕಾರ್ಜುನ್, ಶ್ರೀನಿವಾಸ್ ರೆಡ್ಡಿ, ಲೋಕೇಶ್, ಕರಿಬಸಮ್ಮ, ಜಯಶ್ರೀ ಹಾಗೂ ಜಿ.ನಾಗೇಶ್ ಅವರ ತಾಯಿ ಯಲ್ಲಮ್ಮ, ಪತ್ನಿ ರೇಣುಕಾ, ಪುತ್ರರಾದ ಶಿವು, ರವಿ, ಕಿರಣ್ ಭಾಗವಹಿಸಿದ್ದರು.