ಹರಪನಹಳ್ಳಿ. ಸೆ.9- ಪಟ್ಟಣದ ಹಿಪ್ಪೆ ತೋಟದ ನಿವಾಸಿ ಕನ್ನಿಹಳ್ಳಿ ಮಂಜುನಾಥ ಅವರ ಪುತ್ರಿ ಅರ್ಪಿತ ಕನ್ನಹಳ್ಳಿ ಪ್ರಸಕ್ತ ವರ್ಷದ ವಿಶ್ವದ ಟಾಪ್ 54ನೇ ಶ್ರೇಯಾಂಕದ ವಿಶ್ವವಿದ್ಯಾಲಯ ದಲ್ಲಿ ಪಿ.ಎಚ್.ಡಿ ಮಾಡಲು ಜರ್ಮನಿಯ ಫೆಡರಲ್ ಸರ್ಕಾರದಿಂದ ಪ್ರತಿಷ್ಠಿತ ಡಾಕ್ಟರೇಟ್ ವಿದ್ಯಾರ್ಥಿ ವೇತನ ಪಡೆದಿರುತ್ತಾರೆ.
ಅರ್ಪಿತ ಕನ್ನಹಳ್ಳಿ ಕನ್ನಿಹಳ್ಳಿಯವರು. ಕಳೆದ ವರ್ಷ ಹೈದ್ರಾಬಾದ್ ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣ ಗೊಳಿಸಿದ್ದು, ಇವರು ಉನ್ನತ ಜಾಗತಿಕ ಸಂಸ್ಥೆಯಲ್ಲಿ ನರ ವಿಜ್ಞಾನದಲ್ಲಿ ಸಂಶೋಧನೆ ನಡೆಸುವುದು ಇವರ ಗುರಿಯಾಗಿದೆ.
ಜರ್ಮನಿಯ ಶೈಕ್ಷಣಿಕ ವಿನಿಮಯ ಸೇವೆಗಳ ಫೆಡರಲ್ ಸರ್ಕಾರವು ಪ್ರಾಥಮಿಕ ವಾಗಿ ಪ್ರತಿಭಾನ್ವಿತ ಶೈಕ್ಷಣಿಕ ಸಾಧನೆಗಳನ್ನು ಹೊಂದಿರುವವರಿಗೆ ಪ್ರಯೋಜನೆ ನೀಡುತ್ತದೆ. ಈ ವರ್ಷ ಪೂರ್ಣ ಸಮಯದ ಡಾಕ್ಟರೇಟ್ ಶಿಕ್ಷಣದ ನಿಧಿಗಾಗಿ ಕೇವಲ ಹನ್ನೊಂದು ಭಾರತೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಅರ್ಪಿತ ಕನ್ನಹಳ್ಳಿ ಕೂಡ ಒಬ್ಬರಾಗಿದ್ದಾರೆ.