ಹರಿಹರ, ಸೆ,9- ನಗರದ ದಸರಾ ಮಹೋತ್ಸವ ಸಮಿತಿ ವತಿಯಿಂದ ಬರುವ ಅಕ್ಟೋಬರ್ 3 ರಿಂದ 9 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವ ಆಚರಣೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಪಿ. ಹರೀಶ್ ಹೇಳಿದರು.
ಹರಿಹರೇಶ್ವರ ದೇವಸ್ಥಾನ ಆವರಣದಲ್ಲಿರುವ ಓಂಕಾರ ಮಠದ ಸಭಾಂಗಣದಲ್ಲಿ ಇಂದು ನಡೆದ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ಬರಗಾಲ ಇದ್ದ ಸಂದರ್ಭ ದಲ್ಲಿ ನಾಡಿನ ಜನತೆಯ, ಮಳೆ ಬೆಳೆಗಳು ಚೆನ್ನಾಗಿ ಆಗಲಿ ಎಂದು ನಾಡದೇವತೆ ದುರ್ಗಾ ದೇವಿಗೆ ಪ್ರಾರ್ಥನೆ ಮಾಡಿಕೊಂಡ ಪರಿಣಾಮ ಈ ಬಾರಿ ನಾಡಿನಾದ್ಯಂತ ಮಳೆ, ಬೆಳೆಗಳು ಸಮೃದ್ದಿಯಿಂದ ಕೂಡಿದೆ. ಈ ಬಾರಿಯೂ ದುರ್ಗಾದೇವಿ ಆರಾಧನೆ ಮತ್ತು ಬನ್ನಿ ಮುಡಿ ಯುವ ಧಾರ್ಮಿಕ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಮತ್ತು ಶ್ರದ್ಧಾ-ಭಕ್ತಿಯಿಂದ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.
ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ನಾಡಿನ ಮೈಸೂರಿನ ಮಾದರಿಯಲ್ಲಿ ಹರಿಹರ ನಗರದಲ್ಲಿ ದಸರಾ ಮಹೋತ್ಸವ ಆಚರಣೆ ಮಾಡುವ ಮೂಲಕ ದುರ್ಗಾದೇವಿ ದೇವಿಯ ಆರಾಧನೆ ಮಾಡಲಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ದಸರಾ ಮಹೋತ್ಸವ ಅದ್ಧೂರಿ ಆಚರಣೆಗೆ ನಗರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಾರಾಯಣ ಜೋಯಿ ಸರು, ನಗರಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ್ರು, ತಾ.ಪಂ. ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ, ಅಮರಾವತಿ ರೇವಣಸಿದ್ದಪ್ಪ, ಅಜಿತ್ ಸಾವಂತ್, ಶಿವಪ್ರಕಾಶ್ ಶಾಸ್ತ್ರಿ, ಡಿ.ಜಿ. ಶಿವಾನಂದಪ್ಪ, ಜ್ಯೊತಿ ಪ್ರಕಾಶ್, ಸಿ.ಎನ್. ಹುಲಗೇಶ್, ಕರಿಬಸಪ್ಪ ಕಂಚಿಕೇರಿ, ಹಚ್.ವಿ. ಸುಜಯ್, ಮಹಾಂತೇಶ್ ಭಂಡಾರಿ, ಪ್ರಕಾಶ್ ಶೆಟ್ಟಿ, ಕೆ.ಬಿ. ರಾಜಶೇಖರ್, ಹನುಮಂತಪ್ಪ, ರಾಘವೇಂದ್ರ, ಕಾಳೆರ್ ಮಂಜುನಾಥ್, ಅಂಬಣ್ಣ ಹಂಸಾಗರ್, ಡಾ ಖಮಿತ್ಕರ್, ಅರುಣ್ ಬೊಂಗಾಳೆ, ರಾಜು ಕಿರೋಜಿ, ಮಾರುತಿ ಬೇಡರ್, ಕೃಷ್ಣಮೂರ್ತಿ, ಎಲ್.ಬಿ. ಹನುಮಂತಪ್ಪ, ಹೆಚ್.ಎಸ್. ರಾಘವೇಂದ್ರ, ಆಟೋ ರಾಜು, ರಾಘವೇಂದ್ರ ಬೊಂಗಾಳೆ, ಜ್ಞಾನೇಶ್ವರ ಬೊಂಗಾಳೆ, ಭೋಜರಾಜ್ ಹೋವಳೆ, ಅಂಬಾಸಾ ಮೆಹರ್ವಾಡೆ, ಪತ್ರಕ ರ್ತರ ಸಂಘದ ಅಧ್ಯಕ್ಷೆ ಶಾಂಭಾವಿ ನಾಗರಾಜ್, ಮಾಜಿ ನಗರಸಭೆ ಉಪಾಧ್ಯಕ್ಷೆ ಅಂಬುಜಾ ಪಿ. ರಾಜೋಳ್ಳಿ, ರೂಪಾ ಕಾಟ್ವೆ, ಸಾಕಮ್ಮ, ರೂಪಾ ಸುಮನ್ ಖಮಿತ್ಕರ್, ಸಿದ್ದೇಶ್ ಕಂಚಿ ಕೇರಿ, ಪರುಶುರಾಮ್ ಅಂಬೆಕರ್, ಜಿ.ಕೆ. ಮಲ್ಲಿಕಾರ್ಜುನ್ ಇತರರು ಹಾಜರಿದ್ದರು.
ಶಿವಪ್ರಕಾಶ್ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ಸಾಲಿನ ಲೆಕ್ಕಪತ್ರವನ್ನು ಅಜಿತ್ ಸಾವಂತ್ ಓದಿದರು. 25 ಸಾವಿರ ರೂ.ವೆಚ್ಚದಲ್ಲಿ ದುರ್ಗಾದೇವಿ ಮೂರ್ತಿಯನ್ನು ರೇವಣ ಸಿದ್ದಪ್ಪ ಅಮರಾವತಿ ದೇಣಿಗೆಯಾಗಿ ನೀಡುವುದಾಗಿ ಘೋಷಣೆ ಮಾಡಿದರು.