ಹರಿಹರ, ಸೆ.9- ಇಲ್ಲಿನ ರಾಜಾರಾಮ್ ಕಾಲೋನಿಯ ರಾಮ ಮಂದಿರ ಮುಂಭಾಗದ ವಾರ್ಡ್ ನಂ. 22 ಮತ್ತು 27ರಲ್ಲಿ ಸಿಸಿಎಂಎಸ್ ಯೋಜನೆಯಡಿ ಬೀದಿ ದೀಪಗಳ ಅಳವಡಿಕೆಗೆ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಚಾಲನೆ ನೀಡಿದರು.
ಈ ವೇಳೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ನಗರಸಭೆಯ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಸದಸ್ಯರಾದ ಎ. ವಾಮನಮೂರ್ತಿ, ಆರ್.ಸಿ ಜಾವೇದ್, ಆರೋಗ್ಯ ಇಲಾಖೆಯ ಸಂತೋಷ್, ಜೆಡಿಎಸ್ ಮುಖಂಡ ಮಾರುತಿ ಬೇಡರ್, ಕಾಂಗ್ರೆಸ್ ಮುಖಂಡ ಆಸೀಫ್ ಜುನೇದಿ ಇದ್ದರು.