ದಾವಣಗೆರೆ, ಸೆ. 9- ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಸರ್ವ ಸದಸ್ಯರ ಸಭೆಯು ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸರ್ವ ಸದಸ್ಯರ ಸಭೆಯ ನಡವಳಿಗಳನ್ನು ಓದಿ ಅಂಗೀಕರಿಸಲಾಯಿತು. ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವತಿಯರ ಸಂಘಗಳ ವಾರ್ಷಿಕ ವರದಿಯನ್ನು ಓದಲಾಯಿತು. ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ 2023 – 24 ನೇ ಸಾಲಿನ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಲಾಯಿತು.
ಗೌರವಾಧ್ಯಕ್ಷ ಆರ್.ಜಿ. ನಾಗೇಂದ್ರಪ್ರಕಾಶ್ ಸಮಾಜದ ಅಭಿವೃದ್ಧಿಯ ಕುರಿತು ಮಾತನಾಡಿದರು.