ದಾವಣಗೆರೆ, ಸೆ.9- ಅಕ್ಷರ ವಿದ್ಯೆ ಹಾಗೂ ಜೀವ ನಕ್ಕೆ ಪಾಠ ಕಲಿಸಿದ ಗುರು-ಹಿರಿಯರನ್ನು ಸ್ಮರಿಸುವ ದಿನವೇ ಶಿಕ್ಷಕರ ದಿನಾಚರಣೆ ಎಂದು ತಾಲ್ಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಹೇಳಿದರು. ತಾಲ್ಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಅಜ್ಞಾನ ದಿಂದ ಸುಜ್ಞಾನದತ್ತ ಹಾಗೂ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಅದ್ಭುತ ಶಕ್ತಿಯೇ `ಗುರು’ ಎಂದು ಹೇಳಿದರು. ಮನೆಯೇ ಮೊದಲ ಪಾಠಶಾಲೆ, ಮೊದಲ ಗುರು ತಾಯಿಯಿಂದ ಹಿಡಿದು ಜೀವನದ ಓರೆ-ಕೋರೆಗಳನ್ನು ತಿದ್ದಿದ ಪ್ರತಿಯೊಬ್ಬರೂ ಗುರುಗಳಾಗಿದ್ದು, ಅವರನ್ನು ಈ ದಿನ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಬಿ. ಸುಜಾತ, ಶಿಕ್ಷಕರಾದ ಜಿ. ವಾಣಿ, ಟಿ.ಎಂ. ವಸಂತ, ಆರ್. ಅನ್ನಪೂರ್ಣ, ಎನ್. ಗಂಗಮ್ಮ, ಎಚ್. ಶಿಲ್ಪ, ಮಂಗಳ ಷಡಕ್ಷರಪ್ಪ ಇದ್ದರು.