ಹರಿಹರ, ಸೆ, 5- ಹರಿಹರ ಮರ್ಚೆಂಟ್ಸ್ ಸೌಹಾರ್ದ ಸಹಕಾರಿ ಸಂಘವು 2023-24 ನೇ ಸಾಲಿನಲ್ಲಿ 14.77 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ ನಾಗರಾಜ್ ತಿಳಿಸಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಜರುಗಿದ ಸಂಘದ 10ನೇ ವಾರ್ಷಿಕ ಮಹಾಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.
ಮರ್ಚೆಂಟ್ಸ್ ಸೌಹರ್ದವು 802 ಷೇರುದಾರರನ್ನು ಹೊಂದಿದ್ದು, ಈ ಬಾರಿ 2.59 ಕೋಟಿ ರೂಪಾಯಿ ಠೇವಣಿ ಸಂಗ್ರಹವಾಗಿದೆ. ಕಳೆದ ಸಾಲಿಗಿಂತ 33.59 ಲಕ್ಷ ರೂಪಾಯಿ ಠೇವಣಿ ಮೊತ್ತ ಹೆಚ್ಚಿಗೆ ಆಗಿರುತ್ತದೆ. 2.64 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದ್ದು, ಇದು ಕಳೆದ ಸಾಲಿಗಿಂತ 43.96 ಲಕ್ಷ ರೂ. ಹೆಚ್ಚಳವಾಗಿದೆ. ಜೊತೆಗೆ ಡಿ.ಡಿ.ಸಿ.ಸಿ., ಆಕ್ಸಿಸ್, ಉಜ್ಜೀವನ್, ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಾಗೂ ಜಿಲ್ಲಾ ಒಕ್ಕೂಟ, ಕರ್ನಾಟಕ ಸೌಹಾರ್ದ ಅಸೋಸಿಯೇಷನ್‌ಗಳಲ್ಲಿ 78.12 ಲಕ್ಷ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದರು.
ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ರುದ್ರಯ್ಯ ಕಳ್ಳಿಮಠ ಓದಿ ದರು. ಉಪಾಧ್ಯಕ್ಷ ಡಾ. ಪ್ರವೀಣ್ ಹೆಗಡೆ, ನಿರ್ದೇಶಕರಾದ ಜಿ.ಕೆ. ವೀರಣ್ಣ, ಜಿ. ನಂ ಜಪ್ಪ, ಹೆಚ್.ವಿ ಸುಜಯ್, ರಾಘವೇಂದ್ರ ಬೊಂಗಾಳೆ, ಡಾ. ಎನ್. ಸೀಮಾ, ಸುನೀತಾ ಪಿ. ಬದ್ದಿ, ಜಿ.ಕೆ. ನಾಗರತ್ನ, ಮಂಜುಳಾ ಪ್ರಸಾದ್, ಗಣ್ಯ ವ್ಯಕ್ತಿಗಳಾದ ಟಿ.ಜೆ. ಮುರುಗೇಶಪ್ಪ, ಶ್ರೀನಿವಾಸ್ ಮೂರ್ತಿ, ಹೆಚ್. ವಿ. ಸಂಜಯ್, ರಾಮಚಂದ್ರ ಶೆಟ್ಟಿ, ಪರಶುರಾಮ್ ಬದ್ದಿ, ಸಿಬ್ಬಂದಿಗಳಾದ ಬೀರಪ್ಪ ಎಸ್. ಕಮತರ್, ಕ್ಯಾಷಿಯರ್ ವಿ.ಎಸ್. ಜಯಲಕ್ಷ್ಮಿ, ಪಿಗ್ಮಿ ಸಂಗ್ರಾಹಕರಾದ ಪಿ.ಎಸ್. ಕರಿಬಸಪ್ಪ, ಎನ್.ಎಸ್. ವೀರೇಶ್, ಪರಶುರಾಮ್ ಪವಾರ್, ಎಸ್.ಬಿ. ಕುಂಚೂರು, ರಾಘವೇಂದ್ರ ಇತರರು ಹಾಜರಿದ್ದರು.
ಸುಚೇತಾ ಸುಜಯ್ ಪ್ರಾರ್ಥಿಸಿ ದರು. ಹೆಚ್.ಎಸ್. ಮಂಜುನಾಥ್ ಸ್ವಾಗತಿಸಿದರು. ಮಯೂರ್ ಹೆಚ್.ಎನ್ ವಂದಿಸಿದರು. ರಾಜಶೇಖರಯ್ಯ ನಿರೂಪಿಸಿದರು.
ಈ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಂತಹ ಸದಸ್ಯರ ಮಕ್ಕಳಾದ ಶಾಂಭವಿ ಮಂಜುನಾಥ್, ಮಲ್ಲಿಕಾ ಹಂಚಿನಾಳ ಮಂಜುನಾಥ್, ಶ್ರೀಲಕ್ಷ್ಮಿ ಜ್ಞಾನೇಶ್ವರ ಕೆ.ಎನ್., ಭರತ್ ಹನುಮಂತಪ್ಪ, ಸಹಾನ ಪಿ.ಕೆ. ಕರಿಬಸಪ್ಪ, ನಿಕಿತ್ ಆರ್. ರಾಘ ವೇಂದ್ರ ಬೊಂಗಾಳೆ ರವರಿಗೆ ಸೌಹಾರ್ದದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.