ಈಶ್ವರಮ್ಮ ಶಾಲೆಯ ಕಾರ್ಯಕ್ರಮದಲ್ಲಿ ರಾಜಯೋಗ ಶಿಕ್ಷಕರಾದ ಬ್ರಹ್ಮಾಕುಮಾರಿ ಸೌಮ್ಯ
ದಾವಣಗೆರೆ, ಸೆ. 5 – ರಕ್ಷಾ ಬಂಧನ ಸೋದರ-ಸೋದರಿಯರ ಪವಿತ್ರ ಬಂಧನವನ್ನು ಸಾರುವ ಹಬ್ಬವಾಗಿದೆ. ಸಹೋದರಿಯರು ಸಹೋದರರಿಗೆ ವಿಜಯದ ವೀರ ತಿಲಕವನ್ನು ಹಚ್ಚಿ ರಕ್ಷಾ ಬಂಧನವನ್ನು ಕಟ್ಟುತ್ತಾರೆ. ಅಣ್ಣ, ತಂಗಿ, ಅಕ್ಕ-ತಮ್ಮ ಎಲ್ಲರಿಗೂ ಪರಮಾತ್ಮನ ರಕ್ಷಣೆ ಸಿಗುತ್ತದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಕರಾದ ಬ್ರಹ್ಮಾಕುಮಾರಿ ಸೌಮ್ಯ ಅವರು ಹೇಳಿದರು.
ನಗರದ ಈಶ್ವರಮ್ಮ ಶಾಲೆಯ ಶ್ರೀ ಸತ್ಯಸಾಯಿ ಸಭಾಂಗಣದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಕ್ಷಾ ಬಂಧನ ಒಂದು ಹೃದಯ ಸ್ಪರ್ಶಿಯಾದ ಆಚರಣೆಯಾಗಿದೆ. ರಾಖಿ ಎಂದರೆ ಕಂಕಣಬದ್ಧರಾಗು ವುದು. ಇದೊಂದು ಮಧುರವಾದ ಬಾಂಧವ್ಯ. ಸಿಹಿಯನ್ನು ಹಂಚಿ ಪರಮಾತ್ಮನ ಮಹಾವಾಕ್ಯಗಳನ್ನು ಆಚರಿಸಬೇಕು. ಎಲ್ಲದಕ್ಕೂ ಮುಖ್ಯ ಆಧಾರ ಅಧ್ಯಾತ್ಮಿಕತೆ, ಆದ್ದರಿಂದ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಅಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಎ.ಆರ್. ಉಷಾ ರಂಗನಾಥ್ ಮಾತನಾಡಿ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಬಹಳ ಹಬ್ಬಗಳನ್ನು ಆಚರಿಸುತ್ತೇವೆ. ಪ್ರತಿಯೊಂದು ಹಬ್ಬಗಳ ಅರ್ಥವನ್ನು ತಿಳಿದು ಆಚರಿಸಿದಾಗ ಅದರ ಮಹತ್ವ ಹೆಚ್ಚಾಗುತ್ತದೆ. ಸಹೋದಯರಿಯರಿಗೆ ಶಕ್ತಿ ಕೊಡುವುದು, ಅಣ್ಣ-ತಮ್ಮಂದಿರ ಆತ್ಮೀಯ ಬಂಧನ. ರಕ್ಷಾ ಬಂಧನ ಒಂದು ಭಾವನಾತ್ಮಕವಾದ ಹಬ್ಬ. ರಾಖಿ ಕಟ್ಟಿದವರಷ್ಟೇ ಅಲ್ಲದೇ ಎಲ್ಲರೂ ನಮ್ಮ ಸೋದರಿಯರೆಂದೇ ತಿಳಿಯಬೇಕು ಎಂದು ಹೇಳಿದರು. ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಾದ ವಿದ್ಯಾರ್ಥಿ ಗಳಿಗೆ ರಾಖಿ ಕಟ್ಟುವುದರ ಮೂಲಕ ಸಹೋದರ- ಸಹೋದರಿಯರಾ ದರು. ಈ ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕಿಯಾದ ಶ್ರೀಮತಿ ಶ್ರೀದೇವಿ ಬಿ. ಅವರು ರಕ್ಷಾ ಬಂಧನದ ವಿಧಿ ವಿಧಾನಗಳನ್ನು ನೆರವೇರಿಸಿದರು.
ಶಾಲೆಯ ಪ್ರಾಂಶುಪಾಲರಾದ ಕೆ.ಎಸ್. ಪ್ರಭುಕುಮಾರ್ ಉಪಸ್ಥಿತರಿದ್ದರು.
ಶಾಲಾ ಉಪಪ್ರಾಂಶುಪಾಲರಾದ ಶ್ರೀಮತಿ ಶಶಿರೇಖಾ ಜಿ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಸಂಗೀತ ಶಿಕ್ಷಕಿಯಾದ ಶ್ರೀಮತಿ ವಿದ್ಯಾ ಹೆಗಡೆ ರಕ್ಷಾ ಬಂಧನ ಸಾರುವ ಗೀತೆಗಳನ್ನು ಹಾಡಿದರು. ಸಹ ಶಿಕ್ಷಕಿ ಶ್ರೀಮತಿ ರೋಹಿಣಿ ಎಂ. ವಂದಿಸಿದರು. ಶ್ರೀಮತಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.