ದಾವಣಗೆರೆ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಗಾಯತ್ರಿ ದೇವರಾಜ್ ಶ್ಲ್ಯಾಘನೆ
ದಾವಣಗೆರೆ, ಸೆ.5- ಮಹಿಳಾ ಸಮಾಜದ ಸ್ತ್ರೀಯರು ಕುಟುಂಬ ನಿರ್ವಹಣೆಯ ಜತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಗಾಯತ್ರಿ ದೇವರಾಜ್ ಶ್ಲ್ಯಾಘಿಸಿದರು.
ಸಿಸ್ಟರ್ ನಿವೇದಿತಾ ಮಹಿಳಾ ಸಮಾಜದ ವತಿ ಯಿಂದ ನಗರದ ನೂತನ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ 30ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಮಹಿಳೆಯರು ಸಮಾಜದ ಸ್ಥಾನಮಾನಗಳಿಂದ ವಂಚಿತವಾಗಿದ್ದರು. ಆ ಕಾಲದಲ್ಲೇ ಮಹಿಳೆಯರ ಸಬಲೀಕರಣ ದೃಷ್ಟಿಯಿಂದ `ಸಿಸ್ಟರ್ ನಿವೇದಿತಾ ಮಹಿಳಾ ಸಮಾಜ’ದ ಹಿರಿಯ ಸದಸ್ಯರು ಹೋರಾಟ ಮಾಡಿದ ಬಗೆ ಪ್ರಶಂಸನೀಯ ಎಂದರು.
ಇದೇ ವೇಳೆ ಸಮಾಜದ ಸದಸ್ಯರಾದ ಶ್ವೇತಾ ಪಾಟೀಲ್ ಅವರಿಗೆ `ಸಾಧನಾ ಪ್ರಶಸ್ತಿ’ ನೀಡಿದರು. ಸಮಾಜದ ಎಲ್ಲ ಹಿರಿಯ ಸದಸ್ಯರು ಅನಿಸಿಕೆಗಳನ್ನು ಹಂಚಿಕೊಂಡರು.
ಗೌರಮ್ಮ ವರಹದ, ವಿಮಲ ಮಲ್ಲಪ್ಪ, ಶಶಿಕಲಾ ಚಂದ್ರಮೌಳಿ, ಜಯ ಬಾಲ ರೆಡ್ಡಿ, ನಾಗರತ್ನಮ್ಮ, ಚಂದ್ರಿಕಾ ಪರಮೇಶ್ವರಪ್ಪ, ಹೇಮಾ ಕಾಳಿದಾಸ, ಸುಶೀಲಾ ಉಮೇಶ್, ಶಿವಲಿಂಗಮ್ಮ ರಂಗನಾಥ, ಕುಸುಮಾ ಲೋಕೇಶ್ವರಪ್ಪ, ಗುಣವತಿ ಭೀಮಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ವೈ.ಎಂ. ಬಸವೇಶ್, ಕಾರ್ಯದರ್ಶಿ ಅರುಣ್ ಹುನಗುಂದ, ರಾಮಾಂಜನೇಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ. ಬಸವರಾಜ, ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ. ಶಿವಮೂರ್ತಿ, ದವನ್ ಪಿ ಯು ಕಾಲೇಜಿನ ಪ್ರಾಚಾರ್ಯೆ ಹೆಚ್.ಸಿ. ಅಶ್ವಿನಿ, ಸಿಸ್ಟರ್ ನಿವೇದಿತಾ ಮಹಿಳಾ ಸಮಾಜದ ಉಪಾಧ್ಯಕ್ಷೆ ಗುಣವತಿ ಭೀಮಪ್ಪ, ಪ್ರಧಾನ ಕಾರ್ಯದರ್ಶಿ ರೂಪಾ ಎಸ್ ಹಜಾರೆ, ಖಜಾಂಚಿ ವೀಣಾ ವೇದಮೂರ್ತಿ, ಸಹ ಕಾರ್ಯದರ್ಶಿ ಸುನೀತಾ ಶಿವಪ್ರಸಾದ್ ಮತ್ತಿತರರಿದ್ದರು.