ದಾವಣಗೆರೆ, ಸೆ. 2- ಸ್ಥಳೀಯ ಕವಿ – ಲೇಖಕ ಬಿ.ಎನ್. ಮಲ್ಲೇಶ್ ಅವರ `ಟ್ರ್ಯಾಕುಗಳ ಮೇಲೆ ಹುಣ್ಣಿಮೆ’ ಕವನ ಸಂಕಲನದಿಂದ `ಉತ್ತರೆ ಮಳೆ’ ಎಂಬ ಕವಿತೆಯನ್ನು ದಾವಣಗೆರೆ ವಿಶ್ವವಿದ್ಯಾಲಯದ ಪ್ರಥಮ ಬಿಎಸ್ಸಿ ತರಗತಿಗೆ ಪಠ್ಯವನ್ನಾಗಿ ಆಯ್ಕೆ ಮಾಡಲಾಗಿದೆ. ವಿಶ್ವವಿದ್ಯಾಲಯದ ಸ್ನಾತಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ಜೋಗಿನಕಟ್ಟೆ ಮಂಜುನಾಥ್ ಮತ್ತು ಸಂಪಾದಕ ಡಾ. ಹೆಚ್.ಎಂ. ಲೋಹಿತ್ ಅವರುಗಳು ಈ ಆಯ್ಕೆ ಮಾಡಿದ್ದಾರೆ. ಮಲ್ಲೇಶ್ ಅವರು ಈವರೆಗೆ ಎರಡು ಕವನ ಸಂಕಲನ, ಎರಡು ರಾಜಕೀಯ ವಿಡಂಬನೆ, ಹಲವು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.
December 29, 2024