ಮಹಿಳಾ ಸಾಹಿತ್ಯಕ್ಕೆ ಹೆಳವನಕಟ್ಟೆ ಗಿರಿಯಮ್ಮ ಕೊಡುಗೆ ಅದ್ವಿತೀಯ

ಮಹಿಳಾ ಸಾಹಿತ್ಯಕ್ಕೆ ಹೆಳವನಕಟ್ಟೆ ಗಿರಿಯಮ್ಮ ಕೊಡುಗೆ ಅದ್ವಿತೀಯ

ಕೃತಿ ಬಿಡುಗಡೆಯಲ್ಲಿ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಎ.ಮುರಿಗೆಪ್ಪ ಅಭಿಮತ

ರಾಣೇಬೆನ್ನೂರು,ಸೆ.2- ಇದುವರೆಗೂ ಪ್ರಕಟವಾಗಿ ರುವ ಕನ್ನಡ ಸಾಹಿತ್ಯದಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಕಾವ್ಯಗಳಲ್ಲಿ ಹೊಸ ವಿಚಾರ ಕಾಣುತ್ತದೆ. ಅವಳ ಅಪ್ಪಟ ಬದುಕು ಸಾಹಿತ್ಯದ ಕೃತಿಗಳ ಸ್ಥೂಲವಾದ ಪರಿಚಯಾತ್ಮ ಕದಂತಿದೆ. ಮಹಿಳಾ ಸಾಹಿತ್ಯಕ್ಕೆ ಗಿರಿಯಮ್ಮ ಕೊಟ್ಟ ಕೊಡುಗೆ ಅದ್ವಿತಿಯವಾದುದು ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಎ.ಮುರಿಗೆಪ್ಪ ಹೇಳಿದರು.

ನಿನ್ನೆ ಸಂಜೆ ಇಲ್ಲಿನ ಸಾಹಿತ್ಯ ಭವನದಲ್ಲಿ ಕೆ.ಎಚ್.ಮುಕ್ಕಣ್ಣನವರ `ಹೆಳವನಕಟ್ಟಿ ಗಿರಿಯಮ್ಮ ಸ್ತ್ರೀ ವಾದಿ ಚಿಂತನೆಗಳು’ ಮತ್ತು `ಕಡಗಣ್ಣಲಿ ನೋಡಿದಿರೆನ್ನಯ್ಯ ಹೆಳವನಕಟ್ಟಿ ಗಿರಿಯಮ್ಮ’ ಗ್ರಂಥಗಳನ್ನು ಬಿಡುಗಡೆ ಮಾಡಿ  ಅವರು ಮಾತ ನಾಡಿ, ಈ ಕೃತಿಗಳು ಸಂಶೋಧನಾ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶಕ ಗ್ರಂಥಗಳಾಗಿವೆ ಎಂದರು. ಲೌಕಿಕ ಬದುಕಿನಲ್ಲಿ ಪಾರಮಾರ್ಥತೆ ಸಾಧಿಸಿದ ಸಂತಕವಿ  ಗಿರಿಯಮ್ಮನ ಸಾಹಿತ್ಯ ಸದಾಕಾಲ ಸ್ಮರಣೀಯ. ಗಿರಿಯಮ್ಮನ ಅನೇಕ ಗೀತೆಗಳಲ್ಲಿ ಅವಳ ಬದುಕಿನ ಅಂಶಗಳಿವೆ. ಗಿರಿಯಮ್ಮನ ಭಕ್ತಿಗೂ ಅವಳ ಹಾಡಿಗೂ ನಿಕಟ ಸಂಬಂಧ ವಿದೆ. ಭಕ್ತಿ ಎಂದರೆ ಪರಮಾತ್ಮನ ವಿಷಯದಲ್ಲಿ ಪ್ರೀತಿ ಎಂದರ್ಥ ಎನ್ನುವುದನ್ನು ಗಿರಿಯಮ್ಮ ಸ್ಥಿರಗೊಳಿಸಿದಳು ಎಂದು ಕೃತಿ ಪರಿಚಯಿಸಿದ  ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ‌ನಿರ್ದೇ ಶಕ ಶಿವಾನಂದ ಕೆಳಗಿನಮನಿ ಹೇಳಿದರು.

ಸಂಶೋಧನೆ ಎನ್ನುವುದು ನಿರಂತರ ಪ್ರಕ್ರಿಯೆ. ಆಕರ ದೊರೆತಂತೆ ಮರುಶೋಧನೆ ಗಟ್ಟಿಗೊಳ್ಳುತ್ತದೆ. ಹೆಳವನಕಟ್ಟಿ ಗಿರಿಯಮ್ಮ ಕುರಿತು ಹೆಚ್ಚು ಹೆಚ್ಚು ಪಿಎಚ್‌ಡಿ ಮಹಾಪ್ರಬಂ ಧಗಳು ಬರಬೇಕು. 

ಕೃತಿ ರಚನೆ ಪ್ರಯಾಸದ ಕೆಲಸ.   ಓದುಗರು ಹೆಚ್ಚಾದರೆ  ರಚಿಸಿದವರ ಕಾರ್ಯ ಸಾರ್ಥಕವಾಗುತ್ತದೆ ಎಂದು ಕೃತಿ ಪರಿಚಯಿಸಿದ ಬ್ಯಾಡಗಿ ಸರ್ಕಾರಿ ಕಾಲೇಜ್ ಪ್ರಾಧ್ಯಾಪಕರಾದ ಪುಷ್ಪಾವತಿ ಶಲವಡಿ ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ, ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ನಿಕಟಪೂರ್ವ ಅಧ್ಯಕ್ಷ ಜಿ.ಬಿ.ಮಾಸಣಗಿ, ವೀರೇಶ ಜಂಬಗಿ, ಎ.ಬಿ.ರತ್ನಮ್ಮ,, ಪ್ರೊ. ಲಿಂಗರಾಜ ಕಮ್ಮಾರ, ಬಿ.ಪಿ. ಶಿಡೇನೂರ, ಸೀತಾರಾಮ ಕಣೇಕಲ್ಲ, ಶ್ರೀನಿವಾಸ ಏಕಬೋಟೆ ಹಾಗೂ ಕೃತಿಕಾರ ಕೆ.ಹೆಚ್.ಮುಕ್ಕಣ್ಣ ಮತ್ತಿತರರಿದ್ದರು.

error: Content is protected !!