ದಾವಣಗೆರೆ, ಸೆ.2- ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ನಗರದ ಸಿಎ ಭವನದಲ್ಲಿ ನಿನ್ನೆ ಆದಾಯ ತೆರಿಗೆ ಕಾರ್ಯಾಗಾರ ನಡೆಯಿತು. ಬಿ.ಪಿ. ಸಚಿನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಹೆಚ್.ಟಿ. ಸುಧೀಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೌರವ ಅಧ್ಯಕ್ಷ ಡಿ.ಆರ್. ಶಂಕರ್, ಕಾರ್ಯದರ್ಶಿ ಜಿ. ಮಹಾಂತೇಶ, ಉಪನ್ಯಾಸಕರಾದ ಸಚಿನ್ ಕುಮಾರ್ ಪಾಟೀಲ್, ಪಿ. ಹೇಮಾ ಸುಂದರ ರಾವ್, ತೆರಿಗೆ ಸಲಹೆಗಾರರ ವಲಯ ಉಪಾಧ್ಯಕ್ಷ ಜಂಬಗಿ ರಾಧೇಶ, ಸಂಘದ ಕಟ್ಟಡ ಕಮಿಟಿ ಅಧ್ಯಕ್ಷ ಶಿವಕುಮಾರಪ್ಪ, ಸಂಘದ ಉಪಾಧ್ಯಕ್ಷ ಹೆಚ್.ವಿ. ಸುರೇಶ್, ಸ್ಟಡಿ ಕಮಿಟಿ ಅಧ್ಯಕ್ಷ ಕೆ.ಸಿ. ನಾಗರಾಜ್, ಬಸವೇಶ್ವರ ಹಾಗೂ ಇತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
January 10, 2025