ಭಾರತ ವಿಕಾಸ ಪರಿಷದ್‌ನಿಂದ ರಸಪ್ರಶ್ನೆ, ಗಾಯನ ಸ್ಪರ್ಧೆ : ಬಹುಮಾನ ವಿತರಣೆ

ಭಾರತ ವಿಕಾಸ ಪರಿಷದ್‌ನಿಂದ ರಸಪ್ರಶ್ನೆ,  ಗಾಯನ ಸ್ಪರ್ಧೆ : ಬಹುಮಾನ ವಿತರಣೆ

ದಾವಣಗೆರೆ, ಸೆ.2- ಭಾರತ ವಿಕಾಸ ಪರಿಷದ್‌ ಸ್ವಾಮಿ ವಿವೇಕಾನಂದ ಶಾಖೆ ವತಿಯಿಂದ ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಶಾಖಾ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಮತ್ತು ಜಿಲ್ಲಾ ಮಟ್ಟದ ಭಾರತ್ ಕೋ ಜಾನೋ ರಸ-ಪ್ರಶ್ನೆ ಸ್ಪರ್ಧೆ ನಡೆಯಿತು.

ಸಮೂಹ ಗಾಯನ ಸ್ಪರ್ಧೆಯಲ್ಲಿ 13 ಶಾಲೆಯ ಮಕ್ಕಳು ಹಾಗೂ ಭಾರತ್ ಕೋ ಜಾನೋ ಸ್ಪರ್ಧೆಯಲ್ಲಿ 63 ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಪ್ರಶಸ್ತಿಗಳನ್ನು ಕೊರಳಿಗೇರಿಸಿಕೊಂಡರು.

ಸಮೂಹ ಗಾಯನ ಸ್ಪರ್ಧೆ : `ರಾಷ್ಟ್ರೋ ತ್ಥಾನ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿಗಳಾದ ಎನ್‌. ಪ್ರಾರ್ಥನಾ ಮತ್ತು ಅದಿತಿ ಪ್ರಮೋದ್ ಅವರ ತಂಡಕ್ಕೆ `ಪ್ರಥಮ ಬಹುಮಾನ’ ಹಾಗೂ 4 ಸಾವಿರ ನಗದು ಲಭಿಸಿದೆ. ಶಿರಮಗೊಂಡನ ಹಳ್ಳಿಯ `ಅನ್‌ಮೋಲ್‌ ಪಬ್ಲಿಕ್’ ಸ್ಕೂಲಿನ ವಿದ್ಯಾರ್ಥಿಗಳಾದ ಎಸ್‌. ರಿತನ್ಯ ವಿಭಾ ಮತ್ತು ತೃಪ್ತಿ ಎಂ. ಗಮದ್ ಅವರ ತಂಡವು ದ್ವಿತೀಯ ಬಹುಮಾನದ ಜತೆಗೆ 3 ಸಾವಿರ ನಗದು ಗಳಿಸಿದ್ದಾರೆ.

ಭಾರತ್ ಕೋ ಜಾನೋ ಸ್ಪರ್ಧೆ : (ಜ್ಯೂನಿಯರ್‌ ವಿಭಾಗ) ಬಾಪೂಜಿ ಹೆಚ್‌ಪಿಎಸ್‌ ಆಂಗ್ಲ ಮಾಧ್ಯಮ (ಸಿಬಿಎಸ್‌ಸಿ) ಶಾಲೆಯ ವಿದ್ಯಾರ್ಥಿಗಳಾದ ಪ್ರಚೀತಾ ಎಸ್. ರಾಜ್ ಮತ್ತು ಚಿನ್ಮಯ್ ಆರ್. ಕಲಾಲ್ ಇವರ ತಂಡಕ್ಕೆ 3 ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದು. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಿಇಎ ಹಿರಿಯ ಪ್ರಾಥಮಿಕ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿಗಳಾದ ಎ.ಜೆ. ಶಶಾಂಕ್‌ ಮತ್ತು ಮೋಕ್ಷ ಅವರ ತಂಡಕ್ಕೆ 2 ಸಾವಿರ ನಗದು ಬಹುಮಾನದೊಂದಿಗೆ ದ್ವಿತೀಯ ಬಹುಮಾನ ಪಡೆದಿದ್ದಾರೆ.

(ಸೀನಿಯರ್ ವಿಭಾಗದಲ್ಲಿ) ಸಿದ್ದಗಂಗಾ ಪಿಯು ಕಾಲೇಜಿನ ಆರ್‌. ಅಜಯ್‌ ಕುಮಾರ್‌ ಹಾಗೂ ಭೂಮಿಕಾ ಇಟಗಿ ಅವರ ತಂಡ ಪ್ರಥಮ ಸ್ಥಾನ ಪಡೆಯುವ ಜತೆಗೆ 3 ಸಾವಿರ ನಗದು ಬಹುಮಾನ ಪಡೆದು. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಅಮೃತ ಪಿಯು ಕಾಲೇಜಿನ ಸಾತ್ವಿಕ್ ಪಾಂಡು ಮತ್ತು ಅನನ್ಯ ನಿಗಮ್ ಅವರ ತಂಡ ದ್ವಿತೀಯ ಸ್ಥಾನದೊಂದಿಗೆ 2 ಸಾವಿರ ನಗದು ಲಭಿಸಿದೆ.

ಈ ವೇಳೆ ಎನ್‌.ಪಿ. ಮೌನೇಶಪ್ಪ, ಸಿದ್ದಗಂಗಾ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜಾ, ಮಾಗನೂರು ಬಸಪ್ಪ ಶಾಲೆಯ ಪ್ರಾಚಾರ್ಯ ಡಾ. ಪ್ರಸಾದ್‌, ಎಲ್.ವಿ. ನಾಗಾನಂದ್, ಕೆ.ಕೆ. ನಾಗರಾಜ್‌, ವೇದಾ ಅವಿನಾಶ್‌, ಸಿ.ಪಿ. ಗೀತಾ ಇದ್ದರು.

error: Content is protected !!