ನಿಷೇಧಿತ ದಿನಗಳಲ್ಲಿ ಮದ್ಯ ಮಾರಾಟ ನಡೆದರೆ ಕ್ರಮ : ಎಸ್ಪಿ ಉಮಾ

ನಿಷೇಧಿತ ದಿನಗಳಲ್ಲಿ ಮದ್ಯ ಮಾರಾಟ ನಡೆದರೆ ಕ್ರಮ : ಎಸ್ಪಿ ಉಮಾ

ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕ್ರಮ

ದಾವಣಗೆರೆ, ಸೆ.2- ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮದ್ಯ ಮಾರಾಟ ನಿಷೇಧಿಸಿದ ದಿನಗಳಲ್ಲಿ ನಡೆದರೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಉಮಾ ಪ್ರಶಾಂತ್‌ ಎಚ್ಚರಿಕೆ ನೀಡಿದರು.

ಗಣೇಶ ಚತುರ್ಥಿ ಹಾಗೂ ಈದ್‌ ಮಿಲಾದ್‌ ಹಬ್ಬದ ನಿಮಿತ್ತ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಬಾರ್ ಆಂಡ್‌ ರೆಸ್ಟೋರೆಂಟ್ ಅಸೋಸಿ ಯೇಷನ್ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿ ಸಬೇಕು. ಸಿಎಲ್ ಸಂಖ್ಯೆ ಪ್ರಕಾರ ನಿಗದಿತ ಸಮಯದಲ್ಲಿ ಬಾರ್ ತೆರೆಯಬೇಕು ಮತ್ತು ಮುಚ್ಚಬೇಕು ಎಂದರು.

ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸರಬರಾಜು ಮಾಡಬಾರದು. ಇದನ್ನು ಮೀರಿ ನಡೆದರೆ ಮಾರಾಟ ಮಾಡಿದ ವ್ಯಕ್ತಿ, ಬಾರ್‌ ಮಾಲೀಕರ ಮೇಲೆ ಪ್ರಕರಣ ದಾಖಲಿಸುವ ಜತೆಗೆ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಹೇಳಿದರು.

ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡಬಾರದು. ಪರವಾನಿಗೆ ನಿಯಮ ಪಾಲಿಸುವ ಜತೆಗೆ ಬಾರ್‌ಗಳಲ್ಲಿ ಗಲಾಟೆಗಳಾಗದಂತೆ ಕ್ರಮವಹಿಸಬೇಕು ಮತ್ತು ಸ್ಥಳೀಯ ಠಾಣೆ ಅಥವಾ 112ಕ್ಕೆ ಕರೆ ಮಾಡುವಂತೆ ತಿಳಿಸಿದರು.

ನಗರದ ಬಾರ್, ವೈನ್, ಬಾರ್ ಆಂಡ್ ರೆಸ್ಟೋ ರೆಂಟ್‌ಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕೃ ತವಾಗಿ ಮದ್ಯ ಮಾರುವ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದರು.

ಮೆರವಣಿಗೆ ಸಂದರ್ಭದಲ್ಲಿ ಅಬಕಾರಿ ತಂಡ ನಿಯೋಜಿಸಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟ ನಡೆಯದಂತೆ ಕ್ರಮವಹಿಸಲು ಅಬಕಾರಿ ಇಲಾಖೆಗೆ ಕೋರಿದೆ ಎಂದು ಹೇಳಿದರು.

ಅಬಕಾರಿ ಇಲಾಖೆಯಿಂದ ಪರವಾನಿಗೆ ನವೀಕರಿಸಿಕೊಂಡು, ನವೀಕರಣ ಪ್ರಮಾಣ ಪತ್ರವನ್ನು ಅಂಗಡಿ ಮುಂಭಾಗದಲ್ಲಿ ಅಳವಡಿಸಬೇಕು.  

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್‌. ಬಸವರಾಜ್, ಪೊಲೀಸ್ ನಿರೀಕ್ಷಕ ಲಕ್ಷ್ಮಣ್ ನಾಯ್ಕ ಹಾಗೂ ಜಿಲ್ಲಾ ಬಾರ್ ಆಂಡ್‌  ರೆಸ್ಟೋರೆಂಟ್‌ ಅಸೋಸಿಯೇಷನ್‌ನ ಪದಾಧಿಕಾರಿಗಳಿದ್ದರು.

error: Content is protected !!