ಹರಿಹರ, ಸೆ.1- ದೇಶದ ಸೈನಿಕ ವೃತ್ತಿಯಲ್ಲಿ 18 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ಮರಳಿ ನಗರಕ್ಕೆ ಆಗಮಿಸಿದ ಯೋಧ ಸತ್ಯನಾರಾಯಣ್ ಅವರೆಗೆ ನಗರದ ಸೈನಿಕ ಅಭಿಮಾನಿಗಳ ವತಿಯಿಂದ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಬರ ಮಾಡಿಕೊಳ್ಳಲಾಯಿತು.
ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ನಗರದ ರೈಲ್ವೆ ಸ್ಟೇಷನ್ನಿಂದ ಆರಂಭಗೊಂಡು ಹಳೆ ಪಿ.ಬಿ ರಸ್ತೆ, ಗಾಂಧಿ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆಯ ಮುಖಾಂತರ ಹಾದು ವಿದ್ಯಾನಗರದ `ಸಿ’ ಬ್ಲಾಕ್ನಲ್ಲಿರುವ ಯೋಧರ ಮನೆಗೆ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಯೋಧ ಬಸವರಾಜ್ ಗುತ್ತೂರು ನಿವೃತ್ತ ಯೋಧರ ಅಭಿಮಾನ ಬಳಗದ ಪರಶುರಾಮ್, ಶಿವು, ನವೀನ್, ವಿನಾಯಕ, ಹನುಮಂತ, ಲೋಹಿತ್, ಸುಭಾಷ್, ಗುಡದಯ್ಯ, ಕೇಶವ್, ಹನುಮಂತಪ್ಪ, ಪವನ್, ಶ್ರೀಕಾಂತ್, ಈಚಲಮ್ಮ ಕೊರಚರ ಕ್ಷೇಮಾಭಿವೃದ್ಧಿ ಸಂಘ ರಾಣೇಬೆನ್ನೂರು ಇತರರು ಹಾಜರಿದ್ದರು.