ದಾವಣಗೆರೆ, ಸೆ.. 1- ನಗರದ ಎಸ್.ಎಸ್. ಬಡಾವಣೆಯಲ್ಲಿನ ಅಂಗವಿಕಲ ಆಶಾಕಿರಣ ಟ್ರಸ್ಟ್‌ನ ಶಾಲೆಯಲ್ಲಿ ಈಚೆಗೆ ಸಾಂಸ್ಕೃತಿಕ ಮತ್ತು ನಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೂಲತಃ ಕೇರಳ ರಾಜ್ಯದ ಕೊಟ್ಟಾಯಂನಿಂದ ಆಗಮಿಸಿದ್ದ ಕಲಾವಿದರಾದ ಎಲ್. ಶ್ರೀನಿವಾಸ್ ಪತ್ನಿ ಸರಸ್ವತಿ, ಮಗಳಾದ ಗಾಯಕಿ ಮಾನಸ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಹಾಡಿಗೆ ಕುಣಿದು ಕುಪ್ಪಳಿಸಿದ ಮಕ್ಕಳು
ಈ ಮಕ್ಕಳು ಬುದ್ಧಿಮಾಂದ್ಯರು, ಅಂಗವಿಕಲರು. ಇವರಿಗೆ ಪ್ರಪಂಚದ ಅರಿವಿಲ್ಲ. ಆದರೆ, ಇವರಲ್ಲೂ ವಿಶೇಷವಾದ ಪ್ರತಿಭೆ ಇರುತ್ತದೆ ಎಂಬುದನ್ನು ಸಾಬೀತು ಮಾಡಿದರು. ಹಿಂದಿ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದರು ತಮ್ಮೆಲ್ಲ ನೋವು, ನಲಿವುಗಳನ್ನ ಮರೆತು ಗೊಳ್ಳನೆ ನಕ್ಕರು.
ಬ್ಯಾಂಕ್‌ನ ನಿವೃತ್ತ ಉದ್ಯೋಗಿ ರಾಮಚಂದ್ರ ಶೆಟ್ಟಿ ಅವರು ನಗೆ ಕಾರ್ಯಕ್ರಮ ನಡೆಸಿಕೊಟ್ಟರು.
ಅಂಗವಿಕಲರ ಆಶಾಕಿರಣ ಟ್ರಸ್ಟ್ ನ ಅಧ್ಯಕ್ಷ ರಮಣಲಾಲ್ ಪಿ. ಸಂಘವಿ, ಕಾರ್ಯದರ್ಶಿ ಪೋಪಟ್ ಲಾಲ್ ಜೈನ್, ಸಮಾಜ ಸೇವಕ ಗಣಪತಿ ಕಾಗಲ್ಕರ್, ನಿವೃತ್ತ ಪೊಲೀಸ್ ಅಧಿಕಾರಿ ಟಿ.ಎಸ್. ಮುರುಗಣ್ಣನವರ್, ಹಿರಿಯ ಪತ್ರಕರ್ತ ಪಿ. ಮಂಜುನಾಥ ಕಾಡಜ್ಜಿ, ಪಾಲಿಫೈಬರ್ ನಿವೃತ್ತ ನೌಕರ ಸಿರಾಜ್ ಮಹನೊತ್ ಮತ್ತಿತರರು ಪಾಲ್ಗೊಂಡಿದ್ದರು.