ಹೊನ್ನಾಳಿ : ಶ್ರೀ ಚನ್ನಪ್ಪಸ್ವಾಮಿ ರಥೋತ್ಸವ

ಹೊನ್ನಾಳಿ : ಶ್ರೀ ಚನ್ನಪ್ಪಸ್ವಾಮಿ ರಥೋತ್ಸವ

ಹೊನ್ನಾಳಿ, ಸೆ. 1- ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ, ನೃತ್ಯ ಸೇರಿದಂತೆ ಇತರೆಡೆಯಿಂದ ಬಂದಿದ್ದ ಕಲಾವಿದರ ತಂಡದವರಿಂದ ಡೊಳ್ಳು ಕುಣಿತ, ಕೀಲು ಕುದುರೆ, ನಂದಿ ಕುಣಿತದ ನಡುವೆ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ರಥೋತ್ಸವವು ನಿನ್ನೆ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಶ್ರೀ ಮಠದ ಮುಂಭಾಗದಲ್ಲಿ ವೀರಭದ್ರೇಶ್ವರ ಕೆಂಡದಾರ್ಚನೆ ಮತ್ತು ವೀರಗಾಸೆ ಕಾರ್ಯಕ್ರಮ ನಡೆಯಿತು. ಹರಕೆ ಹೊತ್ತಿದ್ದ ಭಕ್ತರು ಕೆಂಡವನ್ನು ತುಳಿದು, ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಬೇಡಿಕೊಂಡರು.

ನಂತರ ಹಿರೇಕಲ್ಮಠದ ಪೀಠಾಧ್ಯಕ್ಷರಾದ ಒಡೆಯರ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ರಥವನ್ನೇರುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಶ್ರೀ ಚನ್ನಪ್ಪ ಸ್ವಾಮೀಜಿಗೆ ಜಯಘೋಷದೊಂದಿಗೆ ರಥವನ್ನು ಹಿರೇಕಲ್ಮಠದ ದ್ವಾರಬಾಗಿಲಿನಿಂದ ಪಟ್ಟಣದ ವೀರಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಎಳೆದು ತಮ್ಮ ಭಕ್ತಿ ಸೇವೆಯನ್ನು ಅರ್ಪಿಸಿದರು.

error: Content is protected !!