ದಾವಣಗೆರೆ,ಸೆ.1- ನಗರದ ಜಿ.ಎಂ ಫಾರ್ಮಸಿ ಕಾಲೇಜ್ ಆವರಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು.
ಉಮೇಶ್ ನಾಯಕತ್ವದ ಹುಬ್ಬಳ್ಳಿ ವಿಘ್ನೇಶ್ವರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ತಂಡ ಮೊದಲ ಸ್ಥಾನ ಪಡೆಯಿತು. ಸುದೀಪ್ ನಾಯಕತ್ವದ ಹರಪನಹಳ್ಳಿ ಎಸ್.ಸಿ.ಎಸ್ ಕಾಲೇಜ್ ಆಫ್ ಫಾರ್ಮಸಿ ತಂಡ ದ್ವಿತೀಯ ಹಾಗೂ ಸುರೇಶ್ ನಾಯಕತ್ವದ ಚಳ್ಳಕೆರೆ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ತಂಡ ತೃತೀಯ ಸ್ಥಾನ ಪಡೆದವು.
ಅಭಿಷೇಕ್ ನಾಯಕತ್ವದ ಜಿ.ಎಂ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಅಂಡ್ ರಿಸರ್ಚ್ ತಂಡ ನಾಲ್ಕನೇ ಸ್ಥಾನ ಪಡೆಯಿತು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಜಿ.ಎಂ ವಿವಿಯ ಉಪ ಕುಲಪತಿ ಡಾ. ಎಚ್.ಡಿ ಮಹೇಶಪ್ಪ, ರಿಜಿಸ್ಟ್ರಾರ್ ಡಾ. ಸುನಿಲ್ ಕುಮಾರ್, ಜಿ.ಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಬೋಳಕಟ್ಟಿ, ಕ್ರೀಡಾ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಯೂಸೂಫ್, ಧಮನಿ ಹಾಗೂ ಯಶವಂತ ಎ.ಎಂ ಮತ್ತಿತರರು ಭಾಗವಹಿಸಿದ್ದರು.