ದಾವಣಗೆರೆ, ಸೆ. 1 – ನಗರದ ಡಿ.ಸಿ.ಎಂ. ಟೌನ್‌ಶಿಪ್‌ನ ಶ್ರೀ ರಾಮಕೃಷ್ಣ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳು ಕೃಷ್ಣ ಹಾಗೂ ರಾಧೆಯ ವೇಷಗಳನ್ನು ಧರಿಸಿ, ವಿವಿಧ ರೀತಿಯ ನಡಿಗೆ ಹಾಗೂ ಸಮೂಹ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರು.
ಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಮುಖ್ಯೋಪಾಧ್ಯಾಯ ವಿಜಯಕುಮಾರ್, ಶಿಕ್ಷಕಿಯರಾದ ಶೋಭಾ ಹುಲ್ಲುಮನಿ, ಕಾವ್ಯ, ಆಶಾ, ಮಹಾಲಕ್ಷ್ಮಿ, ಅನಿತಾ, ಕರಿಬಸಮ್ಮ, ಶ್ರೀದೇವಿ, ತನುಶ್ರೀ ಸೇರಿದಂತೆ, ಇತರರು ಭಾಗವಹಿಸಿದ್ದರು.