ಹರಿಹರ, ಸೆ.1- ಇಲ್ಲಿನ ಕಾಳಿದಾಸ ನಗರದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಪ್ರೌಢ ಶಾಲೆಯ ಮಕ್ಕಳು ಈಚೆಗೆ ನಡೆದ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕಿಯರ ಥ್ರೋ ಬಾಲ್ ತಂಡವು ಪ್ರಥಮ ಸ್ಥಾನ ಮತ್ತು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಉಷ್ಣಾ ಬಾನು ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಥ್ರೋ ಬಾಲ್ ತಂಡವು ಉತ್ತಮ ಪ್ರದರ್ಶನದೊಂದಿಗೆ
ದ್ವಿತೀಯ ಸ್ಥಾನ ಪಡೆದಿದೆ. ಮಕ್ಕಳ ಈ ಸಾಧನೆಗೆ ಮುಖ್ಯ ಶಿಕ್ಷಕ ರೇವಣನಾಯ್ಕ, ನಿವೃತ್ತ ದೈಹಿಕ ಶಿಕ್ಷಕ ಆರ್.ಜಿ. ಮಂಜುನಾಥ್ ಅಭಿನಂದಿಸಿದ್ದಾರೆ.