ಶ್ರೀಮತಿ ಪ್ರೇಮಾ ರಾಜನಹಳ್ಳಿ ಶ್ರೀ ರಮಾನಂದ ಕಲ್ಯಾಣ ಮಂಟಪದ ಉದ್ಘಾಟನೆಯಲ್ಲಿ ಡಾ.ಜೆ.ವಿ. ನಂದನಕುಮಾರ್
ದಾವಣಗೆರೆ, ಆ. 28- ಹಿಂದೆ ಶೆಟ್ರು ಹುಡುಗ ಎಸ್ಸೆಸ್ಸೆಲ್ಸಿ ಪಾಸ್ ಆಗುವುದೇ ದೊಡ್ಡದು ಎಂಬ ಕಾಲ ಇತ್ತು. ಆದರೆ ಈಗ ಆರ್ಯ ವೈಶ್ಯ ಸಮಾಜದ ಮಕ್ಕಳು ಹೆಚ್ಚು ಪ್ರತಿ ಭಾನ್ವಿತರಾಗಿದ್ದಾರೆ. ಅವಕಾಶಗಳೂ ಹೆಚ್ಚಾಗಿವೆ ಎಂದು ರಾಜ್ಯ ಸರ್ಕಾರದ ವಿಶ್ರಾಂತ ಅಪರ ನಿರ್ದೇ ಶಕ ಡಾ.ಜೆ.ವಿ. ನಂದನಕುಮಾರ್ ಹೇಳಿದರು.
ಶ್ರೀ ವಾಸವಿ ಸೇವಾ ಸಂಘದಿಂದ ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿ ಬುಧವಾರ ಹಮ್ಮಿ ಕೊಳ್ಳಲಾಗಿದ್ದ ಶ್ರೀಮತಿ ಪ್ರೇಮಾ ರಾಜನಹಳ್ಳಿ ಶ್ರೀ ರಾಮಾನಂದ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾಜದ ವಿದ್ಯಾರ್ಥಿಗಳಿಗೆ ಅವಕಾಶಗಳಿಗೆ ತಕ್ಕಂತೆ ಮಾರ್ಗದರ್ಶನ ಅಗತ್ಯವಿದೆ. ಸೂಕ್ತ ಮಾರ್ಗದರ್ಶನ ಸಿಕ್ಕರೆ ಹೊರಗಿನ ಸವಾಲುಗಳನ್ನು ಮೆಟ್ಟಿನಿಂತು ಉತ್ತಮ ಸಾಧನೆ ಮಾಡುತ್ತಾರೆ ಎಂದರು.
ಹಿಂದಿನಿಂದಲೂ ಆರ್ಯವೈಶ್ಯ ಸಮಾಜ ಜನರ ನಂಬಿಕೆಗೆ ಪಾತ್ರವಾಗಿದೆ. ಸಮಾಜ ಸೇವೆ ಮಾಡುವುದು ಸುಲಭವಲ್ಲ. ದಾನಿಗಳಿದ್ದರೂ ಮಾಡುವ ಕೈಗಳ ಅಗತ್ಯವಿದೆ. ವಾಸವಿ ಸಂಘವು ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ಸರ್ಕಾರದಿಂದ, ಆರ್ಯವೈಶ್ಯ ಮಂಡಳಿ ಹಾಗೂ ಮಹಾಸಭಾದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತಿಳಿಸಲಾಗುತ್ತದೆ. ಇದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ ಅವರು ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ವಾಸವಿ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಬಿ.ಎಸ್. ನಾಗಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ ಪ್ರೇಮಾ ರಮಾನಂದ, ಚನ್ನಗಿರಿ ಸತ್ಯನಾರಾಯಣ ಶೆಟ್ರು, ಕೆ.ಎಲ್. ರವಿಂದ್ರನಾಥ್ ಶ್ರೇಷ್ಠಿ, ಹೆಚ್.ಆರ್. ಕಾಶಿವಿಶ್ವನಾಥ ಶ್ರೇಷ್ಠಿ, ಎಲ್.ಜೆ. ರಾಧಾಕೃಷ್ಣ ಶ್ರೇಷ್ಠಿ, ಕೆ.ಎಸ್. ರುದ್ರಶ್ರೇಷ್ಠಿ ಇತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಹೋಮ, ಸತ್ಯನಾರಾಯಣ ಸ್ವಾಮಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆದವು.