ಹಗೇದಿಬ್ಬ ವೃತ್ತದಲ್ಲಿ `ಬಸ್ ಹಮಾಲ’ ನಾಟಕ ಕಾರ್ಯಕ್ರಮದಲ್ಲಿ ವಾಸಿಂ ಚಾರ್ಲಿ
ದಾವಣಗೆರೆ, ಆ.28- ಮೊಬೈಲ್ ವಾಟ್ಸಾಪ್, ಪೇಸ್ಬುಕ್ ಮತ್ತು ಟಿ.ವಿ ಕಾರ್ಯಕ್ರಮಗಳಿಂದ ಅಂತರ ಕಾಪಾಡಿಕೊಂಡು ಅದ್ಭುತವಾದ ನಾಟಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ವಾಸಿಂ ಚಾರ್ಲಿ ಹೇಳಿದರು.
ನಗರದ ಹಗೇದಿಬ್ಬ ಸರ್ಕಲ್ ಬಯಲು ರಂಗಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಸತ್ಯ ನಾರಾಯಣ ಕನ್ನಡ ಕಲಾಬಳಗ ಇವರ ಸಂಯುಕ್ತ ಆಶ್ರಯದಲ್ಲಿ, ಶ್ರೀ ಲಕ್ಷ್ಮೀ ಶಂಕರ ನಾಟಕ ಸಂಘದ ಕಲಾವಿದರು ಅಭಿನಯಿಸಿದ `ಬಸ್ ಹಮಾಲ’ ನಾಟಕ ಪ್ರದರ್ಶನ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ನಾಟಕ ಅಭಿನಯಿಸಲಾಗುತ್ತಿದೆ. ಜಾತ್ರೆ ಮತ್ತಿತರೆ ಸಂದರ್ಭದಲ್ಲಿ ನಾಟಕಗಳು ನಿರಂತರವಾಗಿ ನಡೆಯಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
11ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅಜಿತ್ ಆಲೂರು ನಾಟಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಲಾ ಪೋಷಕರಾದ ಆಲೂರು ಪ್ರಕಾಶಪ್ಪ, ಬೊಮ್ಮಜ್ಜಿ ಚನ್ನಬಸಪ್ಪ, ತೆಲಿಗಿ ಮಲ್ಲೇಶಪ್ಪ, ವಿಠೋಬರಾವ್, ಸ್ಪೂರ್ತಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಕಾಂಗ್ರೆಸ್ ಮುಖಂಡ ಟಿ.ಅಣ್ಣಪ್ಪ, ಗಾಂಧಿನಗರ ಪೊಲೀಸ್ ಠಾಣೆ ಹೆಚ್.ಸಿ ಅಂಬರೀಶ್ ಮತ್ತಿತರರು ಆಗಮಿಸಿದ್ದರು.
ಹಗೇದಿಬ್ಬ ಸರ್ಕಲ್ ಗೆಳೆಯರ ಬಳಗದ ಎ.ಗುಡ್ಡಪ್ಪ, ಪೈ.ಹನುಮಂತಪ್ಪ, ಬಿ.ಮಂಜುನಾಥ್, ರವಿಕುಮಾರ್, ತರಗಾರ ಹನುಮಂತಪ್ಪ, ಬಂದವ್ವರ ರೇವಣಪ್ಪ, ಎಸ್.ಪಿ ಕರೇಗೌಡ್ರು, ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.