ದಾವಣಗೆರೆ, ಆ.28- ನಗರದ ಭದ್ರಾ ಕಾಲೋನಿಯಲ್ಲಿ ಈಚೆಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಸರಸ್ವತಿ ನಗರದ ಎಸ್ಎಲ್ವಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಕಲೋತ್ಸವ-2024-25ರ ಕಾರ್ಯಕ್ರಮ ನೆರವೇರಿತು.
ಮೌಂಟ್ ಎವರೆಸ್ಟ್ ವಿದ್ಯಾಲಯದ ಮುಖ್ಯ ಶಿಕ್ಷಕ ವೀರಭದ್ರಸ್ವಾಮಿ ಹಾಗೂ ಜ್ಞಾನದೀಪ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಡಾ.ಕೆ. ಬಸವರಾಜಪ್ಪ ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿದರು.
ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್.ಎಂ ಕರಿಬಸಪ್ಪ, ಬಿಆರ್ಸಿ ಚೌಡಪ್ಪ ಹಾಗೂ ಸಿಆರ್ಪಿ ಭರತ್, ಸರ್ಕಾರಿ ಕಾಟನ್ ಮಾರ್ಕೆಟ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ಮಹೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಧನಂಜಯಪ್ಪ, ಎಸ್.ಎಸ್.ವಿ. ಕಾನ್ವೆಂಟಿನ ಕಾರ್ಯದರ್ಶಿ ರಾಜಶೇಖರ್, ಎಸ್ಜೆಎಂ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಹೇಶ್ವರಪ್ಪ ಮತ್ತಿತರರಿದ್ದರು.