ಜಗಳೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಶಾಸಕರ ಸಮ್ಮತಿ

ಜಗಳೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಶಾಸಕರ ಸಮ್ಮತಿ

ಜಗಳೂರು, ಆ.26-  ಕನ್ನಡ ನಾಡು, ನುಡಿ ಕಟ್ಟಲು ಜಾತಿ, ಧರ್ಮ ಭೇದ ಭಾವಗಳು ರಾಜಕೀಯ ಬಿನ್ನಾಭಿಪ್ರಯಗಳನ್ನು ಬದಿಗೊತ್ತಿ  ಎಲ್ಲರೂ ಒಂದಾಗಿ  14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸೋಣ  ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು 

ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದರು.

ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ಸಹ ನಮ್ಮ ನಾಡು, ನುಡಿ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಬಿಡಬಾರದು. ಗ್ರಾಮೀಣ ಭಾಗದಿಂದ ಬಂದಂತಹ ನಾವುಗಳೇ ಕನ್ನಡ ಕಟ್ಟುವ ಮತ್ತು ಸಾಹಿತ್ಯ ಬೆಳೆಸುವ ಕಾರ್ಯವನ್ನು ಪೋಷಿಸುವ ಮೂಲಕ ಭವಿಷ್ಯದ ಜನಾಂಗಕ್ಕೆ ಉಳಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದ ಜಿಲ್ಲಾ ಘಟಕಕ್ಕೆ ತನು ಮನ ಧನ ಸಹಾಯ ನೀಡಿ ಅದ್ಧೂರಿ ಜಿಲ್ಲಾ ಸಮ್ಮೇಳನ ನೆಡೆಸಲು ಸಹಕಾರ ನೀಡುತ್ತೇನೆ ಎಂದರು.

ಜಿಲ್ಲಾ  ಕಸಾಪ ಅಧ್ಯಕ್ಷ  ವಾಮದೇವಪ್ಪ  ಮಾತನಾಡಿ, ಜಗಳೂರು ಬರದ ತಾಲ್ಲೂಕು ಆದರೂ ಐತಿಹಾಸಿಕ ಹಿನ್ನೆಲೆಯಿದೆ. ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಕ್ಷೇತ್ರದಲ್ಲಿ ತನ್ನದೇ ಸಾಧನೆ ಮಾಡಿದ ಶಿಕ್ಷಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸ್ವತಹ ಸಾಹಿತ್ಯ ಆಸಕ್ತಿಯನ್ನು ಮೈಗೂಡಿಸಿಕೊಂಡಿರುವ ಶಾಸಕರು ಕ್ಷೇತ್ರ ಪ್ರತಿನಿಧಿಸಿರುವುದು ನಮ್ಮೆಲ್ಲರ ಭಾಗ್ಯ. ಅವರ ನೇತೃತ್ವದಲ್ಲಿ ಅದ್ದೂರಿ ಜಿಲ್ಲಾ ಮಟ್ಟದ ಸಮ್ಮೇಳನ ಮಾಡಲು ಎಲ್ಲರ ಸಹಕಾರ ಮುಖ್ಯ ಎಂದರು. 

ಈ ಸಂದರ್ಭದಲ್ಲಿ   ಜಿಲ್ಲಾ ಕಾರ್ಯದರ್ಶಿ ಬಿ.ದಳ್ಯಪ್ಪ ,    ರೇವಣಸಿದ್ದಪ್ಪ, ಹಿರಿಯ ಸಾಹಿತಿ  ಎನ್ ಟಿ.ಎರ್ರಿಸ್ವಾಮಿ, ಪತ್ರಕರ್ತ  ಜಿಗಳಿ ಪ್ರಕಾಶ್, ಜಗಳೂರು ಕಸಾಪ ಅಧ್ಯಕ್ಷೆ ಸುಜಾತಮ್ಮ , ದಾವಣಗೆರೆ  ಕ.ಸಾ.ಪ ಅಧ್ಯಕ್ಷೆ ಸುಮತಿ  ,ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರಪ್ಪ‌ ,  ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎನ್.ಎಸ್.ರಾಜು , ಷಡಕ್ಷರಪ್ಪ ,  ಕಾರ್ಯದರ್ಶಿ ಜಗದೀಶ್ ಕೂಲಂಬಿ , ಎಂ.ರಾಜಪ್ಪ, ಪರಿಮಳ ಜಗದೀಶ್ ,  ಸಾಹಿತಿ  ಗೀತಾ ಮಂಜು, ಡಿ.ಸಿ.ಮಲ್ಲಿಕಾರ್ಜುನಪ್ಪ ,  ಪಲ್ಲಾಗಟ್ಟೆ ಶೇಖರಪ್ಪ, ಹಿರಿಯ ಪತ್ರಕರ್ತರ ಬಿ.ಪಿ.ಸುಭಾನ್, ಪ್ರಾಂಶುಪಾಲರು ನಾಗಲಿಂಗಪ್ಪ ,   ಗ್ಯಾಸ್ ಓಬಣ್ಣ ,  ಧನ್ಯಕುಮಾರ್   ಇದ್ದರು.

error: Content is protected !!