ಸ್ವಾತಂತ್ರ್ಯ ಪೂರ್ವ ದೇಶದಲ್ಲಿದ್ದ ಏಕತೆ, ಸಮಗ್ರತೆ ಕ್ಷೀಣ

ಸ್ವಾತಂತ್ರ್ಯ ಪೂರ್ವ ದೇಶದಲ್ಲಿದ್ದ ಏಕತೆ, ಸಮಗ್ರತೆ  ಕ್ಷೀಣ

 ಡಾ.ಎಸ್‌.ಎ. ಗಿರಿಧರ್‌ ಆತಂಕ

ದಾವಣಗೆರೆ, ಆ. 27- ಸ್ವಾತಂತ್ರ್ಯ ಪೂರ್ವದಲ್ಲಿದ್ದ ದೇಶವಾಸಿಗಳಲ್ಲಿದ್ದ ಏಕತೆ ಮತ್ತು ಸಮಗ್ರತೆ ಇಂದಿನ ದಿನಗಳಲ್ಲಿ ಕ್ಷೀಣಿಸುತ್ತಿದೆ ಎಂದು ಡಾ.ಎಸ್‌.ಎ. ಗಿರಿಧರ್‌ ಶೋಚಿಸಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮಲ್ಲಿ ಏಕತೆ ಒಂದಿದ್ದರೆ, ದೇಶದ ವಿಚಾರ ಬಂದಾಗ ಏನನ್ನಾದರೂ ಸಾಧಿಸಬಹುದು. ಆದ್ದರಿಂದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂ ಡಿಸಿಕೊಳ್ಳಬೇಕು ಎಂದು ಹೇಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸಾವಿರಾರು ಹೋರಾಟಗಾರರನ್ನು ಸದಾ ಸ್ಮರಿಸಬೇಕೆಂದ ಅವರು, ದಾವಣಗೆರೆ ನಗರಕ್ಕೂ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು ಎಂದು ತಿಳಿಸಿದರು.

ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಯ ಸಂಸ್ಥಾಪಕ ಕೆ.ಎಂ. ಸುರೇಶ್ ಮಾತನಾಡಿ, ಶಿಕ್ಷಣ ಹಾಗೂ ಕಾನೂನು ಚೌಕಟ್ಟಿನಲ್ಲಿ
ಬದುಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ನಿತ್ಯವೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ನಿರ್ದೇಶಕ ಪರಮೇಶ್ವರಪ್ಪ, ಪ್ರಾಚಾರ್ಯ ಎನ್‌. ಪ್ರಭಾವತಿ, ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.

error: Content is protected !!