ದಾವಣಗೆರೆ, ಆ. 22 – ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆಸಿದ ಚರ್ಚಾ ಸ್ಪರ್ಧೆಯಲ್ಲಿ ಜಿ.ಎಂ. ಹಾಲಮ್ಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಭೂಮಿಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ವತಿಯಿಂದ ಆಯೋಜಿಸಿದ್ದ `ಸಹಕಾರ ವಲಯದ ಪ್ರಾಥಮಿಕ ಸಂಘಗಳ ಬಲವರ್ಧನೆಯಿಂದ ಮಾತ್ರವೇ ಸಹಕಾರ ಚಳುವಳಿ ಸದೃಢಗೊಳ್ಳಬಲ್ಲದು ಎಂಬ ವಿಷ ಯದ ಕುರಿತು ವಿರೋಧವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಎಸ್.ಓಂಕಾರಪ್ಪ ಸಹ ಆಡಳಿತಾಧಿಕಾರಿ ಜಿ.ಜೆ. ಶಿವಕುಮಾರ, ವಿದ್ಯಾರ್ಥಿನಿಗೆ ಅಭಿನಂದನೆ ತಿಳಿಸಿದ್ದಾರೆ.