ಸಂತೇಬೆನ್ನೂರು, ಆ. 26 – ಇಲ್ಲಿನ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹೊನ್ನಾಳಿ ಸೇವಾ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ಅವರು ಉಪಸ್ಥಿತರಿದ್ದು, ರಕ್ಷಾ ಬಂಧನದ ಮಹತ್ವ ತಿಳಿಸಿದರು. ವಿಶೇಷವಾಗಿ ನಾವು ಭಾರತೀಯರು ಶ್ರಾವಣ ಮಾಸದ ನೂಲು ಉಣ್ಣಿಮೆ ಯಂದು ಆಚರಿಸುವ ಹಬ್ಬವೇ ರಕ್ಷಾ ಬಂಧನ ಆಗಿದೆ. ಇದು ಸ್ನೇಹ ಸೂತ್ರದಲ್ಲಿ ನಮ್ಮೆಲ್ಲರನ್ನೂ ಸಂಬಂಧದಲ್ಲಿ ತರುವಂತಹ ಹಬ್ಬವಾಗಿದೆ ಎಂದು ತಿಳಿಸಿ, ಎಲ್ಲರಿಗೂ ರಾಖಿ ಕಟ್ಟಿದರು.
ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸೇವಾ ಕೇಂದ್ರದ ಸಂಚಾಲಕರಾದ ಬ್ರಹ್ಮಾಕುಮಾರಿ ಮಮತ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಭಾಗ್ಯ ವಿಜಯ, ಶಿಕ್ಷಕರಾದ ಪ್ರಕಾಶ್, ವೀಣಾ, ವೆಂಕಟೇಶ್, ರಾಮಚಂದ್ರ ವೇದಿಕೆ ಮೇಲೆ ಉಪಸ್ಥಿತರಿದ್ದರು.