ಓದಿನ ಜೊತೆ ಶಿಸ್ತು ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಳ್ಳಬೇಕು

ಓದಿನ ಜೊತೆ ಶಿಸ್ತು ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಳ್ಳಬೇಕು

ಸಂತ ಪೌಲರ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ

ದಾವಣಗೆರೆ, ಆ. 26 – ಸಂತ ಪೌಲರ ಈ ಶಾಲೆಯಲ್ಲಿ ಓದಿನ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ. ಈ ಶಾಲೆಯಲ್ಲಿ ಓದುತ್ತಿರುವ ನೀವುಗಳೂ ಸಹಾ ಶಿಸ್ತು, ಸಮಯ ಪ್ರಜ್ಞೆಯಿಂದ ನಿಮ್ಮಗಳ ಜೀವನದ ಕೌಶಲ್ಯಗಳನ್ನು ಕಲಿತು ಉತ್ತಮ ಪ್ರಜೆಗಳಾಗುವಂತೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ ಆದ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಕರೆ ನೀಡಿದರು.

ನಗರದ ಪಿ.ಜೆ. ಬಡಾವಣೆಯಲ್ಲಿರುವ ಸಂತ ಪೌಲರ ಕಾನ್ವೆಂಟ್ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆಯೋಜಿಸಿದ್ದ 4ನೇ ಹಂತದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನೂ ಕೂಡಾ ಈ ಸಂತ ಪೌಲರ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಉತ್ತಮ ಮೌಲ್ಯಗಳನ್ನು ಮೈಗೂಡಿ ಸಿಕೊಂಡು ಇಂದು ಪ್ರತಿಷ್ಠಿತ ವ್ಯಕ್ತಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಶಾಲೆಯಲ್ಲಿ ಓದಿದವರು ಬರೀ ನಮ್ಮ ಜಿಲ್ಲೆ, ರಾಜ್ಯವಲ್ಲದೇ ಬೇರೆ ಬೇರೆ ದೇಶಗಳಲ್ಲಿ ಸಿನಿಮಾ ನಟರಾಗಿ, ಕಲಾವಿದರಾಗಿ, ರಾಜಕಾರಣಿ, ವಿಜ್ಞಾನಿ, ಅಧಿಕಾರಿಗಳಾಗಿ, ಸಾಫ್ಟ್ ವೇರ್ ಇಂಜಿನಿಯರ್‍ಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೆನಿಸಾ ಮಾತನಾಡಿ, ವಲ್ರ್ಡ ವೈಡ್ ವೆಬ್‍ನಂತೆ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾ, ಸಾಧನೆಯ ಶಿಖರವನ್ನೇರಿ ಶಾಲೆಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈಗಿನ ವಿದ್ಯಾರ್ಥಿ ನಿಯರೂ ಸಹಾ ಇದೇ ಪಥದಲ್ಲಿ ಸಾಗಿ ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಸುಪ್ರಿಯ, ಸಿಬಿಎಸ್‍ಇ ವಿಭಾಗದ ಆಡಳಿತಾಧಿಕಾರಿ ಸಿಸ್ಟರ್ ಮೆಟಿಲ್ಡಾ, ಉಸ್ತುವಾರಿ ಮುಖ್ಯೋಪಾಧ್ಯಾಯಿನಿ ನಿರ್ಮಲ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ವೈಲೆಟ್, ಕಾಲೇಜಿನ ಪ್ರಾಚಾರ್ಯ ಕೆ.ಟಿ. ಮೇಘನಾಥ, ಎಂ.ಕೆ. ಮಂಜುಳಾ, ಹಳೆಯ ವಿದ್ಯಾರ್ಥಿನಿಯರಾದ ಎಸ್.ಜಿ. ಸುಶೀಲ, ಮಮತಾ, ಟಿ.ಎಂ. ವೀಣಾ, ಕವಿತಾ ಹಾಗೂ ವಿವಿಧ ವಿಭಾಗಗಳ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು. 

ಶಿಕ್ಷಕರಾದ ಗೀತಾ ಸ್ವಾಗತಿಸಿದರೆ, ಯಮುನಾ ವಂದಿಸಿದರು.

error: Content is protected !!