ಹರಿಹರ, ಆ. 26- ನಗರದ ಅಂಜುಮಾನ್ ಇಸ್ಲಾಮಿಯಾ ಸಂಸ್ಥೆ ವತಿಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳನ್ನು ತೇಜೋವಧೆ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಸಮಾಜದ ಶಾಂತಿ ವಾತಾವರಣ ಕದಡುತ್ತಿರುವ ರಾಮಗಿರಿ ಮಹಾರಾಜ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿ ಗ್ರೇಡ್ 2 ತಹಶೀಲ್ದಾರ್ರವರಿಗೆ ಮನವಿ ಅರ್ಪಿಸಲಾಯಿತು.
ಈ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ಮಾತನಾಡಿ, ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮಗಿರಿ ಮಹಾರಾಜ್ ಅವರು ಪ್ರವಾದಿಗಳ ಹಾಗೂ ತಾಯಿ ಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅವ ಮಾನಿಸಿದ್ದಾರೆ. ಇದು ದೇಶದ ಮುಸ್ಲಿಂ ಸಮುದಾಯದ ಹೃದಯವನ್ನು ಘಾಸಿಗೊಳಿಸಿದೆ ಎಂದು ಹೇಳಿದರು.
ಮತ್ತೊಂದು ಮನವಿಯನ್ನು ಅರ್ಪಿಸಿ ಮಾತನಾಡಿದ ಮುಖಂಡರು, ಈಚೆಗೆ ಕೊಲ್ಕತ್ತಾದಲ್ಲಿನ ಆರ್.ಜಿ. ಕರ್. ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ನ ವೈದ್ಯೆ ಯೋ ರ್ವರ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದಿದ್ದು, ಸರ್ಕಾರ ಆರೋಪಿಗಳನ್ನು ಪತ್ತೆ ಮಾಡಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಜುಮಾನ್ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಏಜೆಂಟ್ ಆಹ್ಮದ್, ಕಾರ್ಯದರ್ಶಿ ಸೈಯದ್ ಆಸೀಫ್ ಜುನೇದಿ, ಫೈಯಾಜ್ ಆಹ್ಮದ್, ನಗರಸಭೆ ಸದಸ್ಯರಾದ ಆರ್.ಸಿ. ಜಾವೇದ್, ಮುಜಾಮಿಲ್ ಬಿಲ್ಲು, ಮುಖಂಡರಾದ ಸನಾವುಲಾ ಸಾಬ್, ಹಾಜಿ ಹಾಲಿ, ಸಾಧಿಕ್, ನೂರುಲ್ಲಾ, ಯಾಸೀನ್ ಸಖಾಫಿ, ಷರೀಫ್ ಸಖಾಫಿ, ನೂರುಲ್ಲಾ, ಮನಸೂರು ಮದ್ದಿ, ಜಾಕೀರ್, ಮಹಬೂಬ್ ಎಸ್.ಎಸ್.ಕೆ, ಅತಾವುಲ್ಲಾ, ಅಪ್ರೋಜ್, ಮುಕ್ತಿಯಾರ್, ಸೈಯದ್ ದರ್ವೇಶ್, ರೋಷನ್ ಇಕ್ಬಾಲ್ ಇತರರು ಹಾಜರಿದ್ದರು.