ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಯುಬಿಡಿಟಿಗೆ ಚಿನ್ನ, ಬೆಳ್ಳಿ

ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಯುಬಿಡಿಟಿಗೆ ಚಿನ್ನ, ಬೆಳ್ಳಿ

ದಾವಣಗೆರೆ, ಜು. 25- ಬೆಂಗಳೂರಿನ ನ್ಯೂ ಹಾರಿಜನ್‌ ಮಹಾವಿದ್ಯಾಲಯದಲ್ಲಿ ನಡೆದ ವಿ.ಟಿ.ಯು ರಾಜ್ಯ ಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ನಗರದ ಯುಬಿಡಿಟಿ ಇಂಜಿನಿಯರಿಂಗ್‌ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. 

ಕಾಲೇಜಿನ ಎಂ.ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿ ಎಂ. ಮಂಜುನಾಥ್‌ 66 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರೆ, ಇಂಡಸ್ಟ್ರಿಯಲ್‌ ಆಂಡ್‌ ಪ್ರೊಡಕ್ಷನ್‌ ಇಂಜಿನಿಯರಿಂಗ್‌ನ ವಿದ್ಯಾರ್ಥಿ ಮೊಹಮ್ಮದ್‌ ಕಾಸಿಂ ಬೆಳ್ಳಿ ಪದಕ ಪಡೆದು, ವಿಟಿಯುನ ಬಲಾಢ್ಯ ಮನುಷ್ಯ ಆಗಿ ಹೊರಹೊಮ್ಮಿದ್ದಾರೆ.

error: Content is protected !!