ಹರಿಹರ, ಆ. 25 – ನಗರದ ಹೊಸಭರಂಪುರ ಬಡಾವಣೆಯ ಶ್ರೀ 108 ಲಿಂಗೇಶ್ವರ ದೇವಸ್ಥಾನ ಹಿಂಬದಿಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಯ ಕಲ್ಯಾಣ ಮಹೋತ್ಸವ ಅಂಗವಾಗಿ ಬೆಳಗ್ಗೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕ, ಅಲಂಕಾರ, ಹೋಮ, ಹವನ, ಪೂರ್ಣಾವುತಿ ಕಲ್ಯಾಣೋತ್ಸವದ ನಂತರ ರಥೋತ್ಸವ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕ ವರಹಾಚಾರ್, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಸಮಿತಿಯ ಮುಖಂಡ ವೈ ಲಕ್ಷ್ಮಣ ರವರ ನೇತೃತ್ವದಲ್ಲಿ ನಡೆದ ಹೋಮ, ಹವನ, ಪೂಜೆಯನ್ನು ಆರೋಗ್ಯ ಇಲಾಖೆ ಶಿರಸ್ಥೇದಾರ ಶಿವಕುಮಾರ್ ರೂಪಾ ಹಾಗೂ ವರ್ತಕ ಗಿರೀಶ್ ಮೀನಾ ಭೂತೆ ದಂಪತಿಗಳು ಹೋಮ, ಹವನ, ಪೂಜೆಯನ್ನು ನೆರವೇರಿಸಿದರು.
January 18, 2025