ನಗರದಲ್ಲಿ ಇಂದು ಸೈಕಲ್ ವಿತರಣೆ

ನಗರದಲ್ಲಿ ಇಂದು ಸೈಕಲ್ ವಿತರಣೆ

ಸೆಸ್ ವಸೂಲಿ ಮಾಡಿ ಅಸಂಘಟಿತ ಕಾರ್ಮಿಕರನ್ನು ವಿಭಜಿಸುತ್ತಿರುವ ಸರ್ಕಾರ

`ಕಾಕಾ ಪಾಟೀಲ ನಿನಗೂ ಫ್ರೀ ಮಹಾದೇವಪ್ಪ ನಿನಗೂ ಫ್ರೀ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿದ ಮಾತುಗಳು ಕಳೆದ ವರ್ಷ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಹಾಗೂ ಚುನಾವಣೆಯ ನಂತರವೂ ಜನರ ಬಾಯಲ್ಲಿ ನಲಿದಾಡುತ್ತಿದ್ದವು. ಐಎಎಸ್ ಅಧಿಕಾರಿಯಾಗಿ ರಲಿ ಬಡ ಮಹಿಳೆಯೇ ಆಗಿರಲಿ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಕೆಲ ಗ್ಯಾರಂಟಿ ಯೋಜನೆಗಳನ್ನು ಎಪಿಎಲ್ – ಬಿಪಿಎಲ್ ಭೇದವಿಲ್ಲದೆ ಕೊಡಲಾಗುತ್ತಿದೆ.

ಇಂತಹ ಸರ್ವ ವ್ಯಾಪಿ ಸರ್ವಸ್ಪರ್ಶಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಕಾಲದಲ್ಲಿ ಅಸಂಘಟಿತ ಕಾರ್ಮಿಕರಿಗೆ ಮಾತ್ರ ಭೇದ ಮಾಡಲು ಸರ್ಕಾರ ಮುಂದಾಗಿರು ವುದು ಸರಿಯೇ ? ಎಂಬ ಪ್ರಶ್ನೆ ಮೂಡುತ್ತದೆ.

ಕಟ್ಟಡ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದರೂ ಸಹ ಅವರಿಗಾಗಿ ಪ್ರತ್ಯೇಕ ಮಂಡಳಿ ರಚಿಸಿ, ಕೆಲ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಚಲನಚಿತ್ರ ಹಾಗೂ ರಂಗಭೂಮಿ ಮತ್ತಿತರ ಕಲಾವಿದರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಇದೆ. ಗಿಗ್ ಕಾರ್ಮಿಕರಿಗೂ ಸೌಲಭ್ಯಗಳನ್ನು ವಿಸ್ತರಿಸಲು ಯೋಜಿಸಲಾಗುತ್ತಿದೆ. ಈ ಕುರಿತ ಕರಡು ಮಸೂದೆಯನ್ನು ರೂಪಿಸಲಾಗಿದೆ. 

ಈ ವಲಯದ ಸಂಬಂಧಿಸಿದವರಿಂದ ಸೆಸ್ ವಸೂಲಿ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಈ ಸೆಸ್ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ, ಅಸಂಘಟಿತ ವಲಯದ ಬಡವರಲ್ಲಿ ಭೇದ ಮಾಡುವುದು ಎಷ್ಟರಮಟ್ಟಿಗೆ ಸರಿ.

 ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಪರ ತೀರ್ಪೊಂದನ್ನು ನೀಡಿತ್ತು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳಲ್ಲಿ ಭೇದ ಮಾಡಬಾರದು ಎಂದು ಸಮಾಜದ ಒಂದು ವರ್ಗ ಆಕ್ಷೇಪಿಸಿದೆ. ಈ ತೀರ್ಪಿನ ವಿರುದ್ಧ ಕೆಲ ಸಂಘಟನೆಗಳು ಭಾರತ ಬಂದ್‌ಗೂ ಕರೆ ನೀಡಿದ್ದವು.

ಇಂತಹ ಸಂದರ್ಭದಲ್ಲಿ ಅತ್ಯಂತ ಕಡು ಬಡವರಾಗಿರುವ ಅಸಂಘಟಿತ ಕಾರ್ಮಿಕರನ್ನು ಬೇರೆ ಬೇರೆಯಾಗಿ ನೋಡುವುದು ನ್ಯಾಯೋಚಿ ತವೇ? ಅಲ್ಲದೆ ಕಟ್ಟಡ ಕಾರ್ಮಿಕರೆಂದು ಗುರುತಿಸಿಕೊಂಡಲ್ಲಿ ಹೆಚ್ಚುವರಿ ಸೌಲಭ್ಯಗಳು ಸಿಗುವ ಕಾರಣ ಇತರೆ ವಲಯಗಳ ಸಾಕಷ್ಟು ಕಾರ್ಮಿಕರು ನಾವೂ ಸಹ ಕಟ್ಟಡ ಕಾರ್ಮಿಕರು ಎಂದು ನೋಂದಾಯಿಸಿ ಕೊಂಡಿದ್ದಾರೆ. ಇವರಲ್ಲಿ ನಿಜವಾದ ಕಟ್ಟಡ ಕಾರ್ಮಿಕರು ಯಾರು ಎಂಬುದನ್ನು ಪತ್ತೆ ಮಾಡಲು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗೂಢಚಾರಿಕೆಯ ರೀತಿಯಲ್ಲಿ ಪರಿಶೀಲನೆ ನಡೆಸಬೇಕಾಗಿ ಬಂದಿರುವುದು ವಿಪರ್ಯಾಸ.

ಸರ್ಕಾರ ಕಲಾವಿದರು ಮತ್ತು ಗಿಗ್‌ ಕಾರ್ಮಿಕರಿಗೆ ಮಂಡಳಿಗಳನ್ನು ಸ್ಥಾಪಿಸಲು ಮುಂದಾದಲ್ಲಿ, ಇತರೆ ವರ್ಗದವರೂ ಸಹ ತಮಗೂ ಮಂಡಳಿ ಬೇಕು ಎಂಬ ಬೇಡಿಕೆ ಮುಂದಿಡುವ ಸಾಧ್ಯತೆ ಇದೆ. ಇಂತಹ ಮಂಡಳಿಗಳನ್ನು ರಚಿಸುತ್ತಾ ಹೋದಲ್ಲಿ ಒಂದಿಷ್ಟು ಅಧಿಕಾರಿಗಳಿಗೆ ಕೆಲಸ ಹಾಗೂ ಇನ್ನೊಂದಿಷ್ಟು ರಾಜಕಾರಣಿಗಳಿಗೆ ಗಂಜಿ ಕೇಂದ್ರದ ಆಶಯ ಆಗಬಹುದು.

ಇಷ್ಟೆಲ್ಲಾ ಪುರಾಣಗಳನ್ನು ಮಾಡುವ ಬದಲು ಎಲ್ಲಾ ಕಾರ್ಮಿಕರಿಗೂ ಗೌರವಯುತ ವಾಗಿ ಬದುಕಲು ಸಾಧ್ಯವಾಗುವಂತಹ ಸೌಲಭ್ಯ ಗಳನ್ನು ಕಲ್ಪಿಸಲು ಸರ್ಕಾರಗಳು ಮುಂದಾಗ ಬೇಕಿದೆ. ಉನ್ನತ ಹುದ್ದೆಯಲ್ಲಿರು ವವರು ಹಾಗೂ ಹೆಚ್ಚಿನ ಆದಾಯ ಹೊಂದಿರು ವವರು ಮಹಿಳೆ ಎಂಬ ಕಾರಣಕ್ಕಾಗಿ ಉಚಿತ ಪ್ರಯಾಣದ ಸೌಲಭ್ಯ ನೀಡಲು ಸರ್ಕಾರಕ್ಕೆ ಸಾಧ್ಯವಾಗಬಹು ದಾದರೆ, ಗೃಹಿಣಿಯರಿಗೆ ತಿಂಗಳಿಗೆ 2000 ರೂ. ಕೊಡಲು ಸಾಮರ್ಥ್ಯ ಇರಬೇಕಾದರೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸೌಲಭ್ಯ ನಿರಾಕರಿಸುವುದು ಸರಿಯೇ?

ಸೆಸ್ ಲಭ್ಯವಿರುವ ವಲಯಗಳಿಗೆ ಒಂದು ಸೌಲಭ್ಯ ಇರುವವರಿಗೆ ಮತ್ತೊಂದು ಸೌಲಭ್ಯ ಎಂದು ಹೇಳಿದರೆ ಸರ್ಕಾರವೇ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ನೀತಿ ಪಾಲಿಸಿ ದಂತಾಗುತ್ತದೆ. ಸಂವಿಧಾನದ ಆಶಯಗಳನ್ನು ಕಡೆಗಣಿಸಿದಂತಾಗುತ್ತದೆ.

ಗ್ಯಾರಂಟಿ ಸೌಲಭ್ಯಗಳನ್ನು ವಿತರಿಸುವಾಗ ಕಾಕಾ ಪಾಟೀಲ ಹಾಗೂ ಮಹದೇವಪ್ಪ ಒಂದೇ ತಟ್ಟೆಯಲ್ಲಿ ಇಟ್ಟು ತೂಗಬಹುದಾದರೆ, ಅಸಂಘಟಿತ ಕಾರ್ಮಿಕರ ವಿಷಯ ಬಂದಾಗ ಕಾಕಾ ಪಾಟೀಲ್ ಹಾಗೂ ಮಹದೇವಪ್ಪ ನಡುವೆ ಭೇದ ಮಾಡುವುದು ಸರಿಯೇ?

– ಬಿ.ಜಿ. ಪ್ರವೀಣ್ ಕುಮಾರ್

ದಾವಣಗೆರೆ.

error: Content is protected !!