ದಾವಣಗೆರೆ, ಆ. 25 – ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡೆಗಳು ನಡೆಯುತ್ತಿದ್ದು,ಈಚೆಗೆ ನಡೆದ ಬಾಲಕರ ಟೆನ್ನಿ ಕಾಯ್ಟ್ ಪಂದ್ಯದಲ್ಲಿ ಮಾಗನೂರು ಬಸಪ್ಪ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರು, ಕಾಲೇಜಿನ ನಿರ್ದೇಶಕ ಡಾ. ಜಿ.ಎನ್.ಹೆಚ್ ಕುಮಾರ್, ಪ್ರಾಚಾರ್ಯ ಡಾ. ಪ್ರಸಾದ್ ಬಂಗೇರ ಎಸ್. ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
January 15, 2025