ಹರಿಹರ, ಆ. 23 – ನಗರದ ಲಾರಿ ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಮಿನ್ ಜಾಬಿಬ್ ಹಿಂದೂಸ್ಥಾನ ಟ್ರೇಡರ್, ಗ್ಯಾರೇಜ್ ಮತ್ತು ಸ್ಕರ್ಪಾ ಮರ್ಚೆಂಟ್ ವತಿಯಿಂದ ನಾಡಿದ್ದು ದಿನಾಂಕ 25 ರಂದು ಭಾನುವಾರ ಬೆಳಗ್ಗೆ 12.15ಕ್ಕೆ ಭಾಗೀರಥಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ಬಡವರಿಗೆ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸೈಯದ್ ಯೂಸುಫ್ ಹಾಗೂ ಜಪಾನ್ ರಫೀಕ್ ಸಾಬ್ ಹೇಳಿದರು.
ನಗರದ ಕಾರ್ಯ ನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮುಸ್ಲಿಂ ಸಮುದಾಯದ ಧರ್ಮಗುರುಗಳಾದ ಮೌಲಾನ ಖಾಜಿ ಶಂಶುದ್ದಿನ್ ಸಾಬ್ ಬರಕಾತಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್. ರಾಮಪ್ಪ, ಅಬು ಸೈಯದ್, ನಂದಿಗಾವಿ ಶ್ರೀನಿವಾಸ್, ತಹಶಿಲ್ದಾರ್ ಗುರು ಬಸವರಾಜ್, ಸಿಪಿಐ ಎಸ್ ದೇವಾನಂದ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಕಾವುಲ್ಲಾ, ಖಲೀಲ್ ಸಾಬ್, ಶಶಿನಾಯ್ಕ್, ಸೈಯದ್ ಇಸ್ಮಾಯಿಲ್, ಮಹಬೂಬ್ ಸಾಬ್, ಸೈಯದ್ ಅಸ್ಲಾಂ, ಬಿಸ್ಮಿಲ್ ರಫಿಕ್, ಮಹಮ್ಮದ್ ರಫಿಕ್ ಇತರರು ಹಾಜರಿದ್ದರು.