ದಾವಣಗೆರೆ, ಆ. 22- ನಗರ ಹಾಗೂ ನಗರದ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶ ಸೇರಿದಂತೆ ವಿವಿಧೆಡೆ 78ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ – ಸಂಭ್ರಮದಿಂದ ಆಚರಿಸಲಾಯಿತು.
ದಾವಣಗೆರೆ
ನಿಟುವಳ್ಳಿ ಜ್ಞಾನದೀಪ ಪಬ್ಲಿಕ್ ಶಾಲೆ : ಶಾಲೆಯ ನಿರ್ದೇಶಕ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ. ಪ್ರಭು ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಕಾರ್ಯದರ್ಶಿ ಕೆ. ಬಸವರಾಜಪ್ಪ ಮಾತನಾಡಿದರು. ಮುಖ್ಯ ಶಿಕ್ಷಕ ಕೆ. ನಾಗರಾಜ್, ಸಮನ್ವಯಾಧಿಕಾರಿ ಗಿರಿಜಾ ಕಬ್ಬೂರು, ಸಹ ಶಿಕ್ಷಕಿಯರಾದ ಶ್ರೀಮತಿ ರಶ್ಮಿ, ರಮ್ಯಾ, ಗೀತಾ, ಅಂಬಿಕಾ, ನಿರ್ಮಿತಾ, ಪೂರ್ಣಿಮಾ ಉಪಸ್ಥಿತರಿದ್ದರು. ರೂಪಾ ಪ್ರಾರ್ಥಿಸಿದರು. ಗಾಯತ್ರಿ ವಂದಿಸಿದರು.
ರಾಯಣ್ಣ ಯುವ ಬ್ರಿಗೇಡ್ : ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಯಕುಮಾರ್, ತೋಟಗೇರ್ ಹೊನ್ನಪ್ಪ, ತೋಟಗೇರ್ ದೇವರಾಜು, ಹರೀಶ ಟಿವಿ, ಕೆ.ಎನ್. ಚೇತನ, ಪ್ರಕಾಶ, ಮಹೇಶ, ನಾಗರಾಜ, ಮಣಿಕಂಠ, ಹರೀಶ, ಹನುಮಂತಪ್ಪ, ಜಯಪ್ಪ, ನಿಂಗರಾಜ್, ಮಾರುತಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ|| ಮಹಾಂತಸ್ವಾಮಿ ಪದವಿಪೂರ್ವ ಕಾಲೇಜು : ಹರ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಬಿ.ಸಿ. ಉಮಾಪತಿ ಹಾಗೂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಮರ್ಥ ಅಕಾಡೆಮಿಯ ಅಧ್ಯಕ್ಷ ಪ್ರದೀಪ್ ಧ್ವಜಾರೋಹಣ ನೆರವೇರಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಎಂ.ಎಸ್. ದೇವರಾಜ್, ಅಶೋಕ್, ಟ್ರಸ್ಟಿನ ನಿರ್ದೇಶಕರಾದ ಎಸ್.ಕೆ. ಶ್ರೀಧರ್, ರಾಜಶೇಖರ್ (ರಾಜಣ್ಣ ಕಡೇಕೊಪ್ಪ), ಬಸವರಾಜ್ ಅಣಪೂರ್, ಎಂ.ದೊಡ್ಡಪ್ಪ, ಬಾದಾಮಿ ಜಯಮ್ಮ, ಟ್ರಸ್ಟಿನ ಆಡಳಿತಾಧಿಕಾರಿ ಎಸ್. ಮಲ್ಲಿನಾಥ್,ಯೋಧ ಮಲ್ಲನಗೌಡ ಪಾಟೀಲ್, ಸಮಾಜದ ಮಹಿಳಾ ಘಟಕದ ಪದಾಧಿಕಾರಿ ಶ್ರೀಮತಿ ಸುಷ್ಮಾ ಪಾಟೀಲ್, ಶ್ರೀಮತಿ ಮೀನಾ ಪ್ರಸಾದ್ ಅಣಪೂರ್, ಶ್ರೀಮತಿ ವೀಣಾ ನಟರಾಜ್ ಬೆಳ್ಳೂಡಿ, ಶ್ರೀಮತಿ ಶಶಿಕಲಾ ಬಡದಾಳ, ಶ್ರೀಮತಿ ದೀಪಾ ದೇವರಾಜ್, ಎನ್.ಹೆಚ್. ಗುರುರಾಜ್, ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರಾಮಕೃಷ್ಣ ಇಂಟರ್‌ನ್ಯಾಷನಲ್ ಶಾಲೆ : ವಿಜಯ ಟ್ರಾನ್ಸ್‌ಪೋರ್ಟ್ ಮಾಲೀಕ ಹಾಗೂ ರಾಮಲೀಲಾ ಎಜುಕೇಷನ್ ಟ್ರಸ್ಟ್ ನಿರ್ದೇಶಕರಾದ ಶ್ರೀಮತಿ ಸಹನ ವಿಜಯಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶ್ರೀಮತಿ ವಿಜಯಕುಮಾರಿ ಉಮೇಶ ಬಾಬು ಮಠದ್, ಡಿ.ಸಿ. ಸುರೇಶ್, ಶೋಭಾ ಹುಲ್ಲುಮನಿ, ಕಾವ್ಯ, ಆಶಾ, ಮಹಾಲಕ್ಷ್ಮಿ ಅನಿತಾ, ಕರಿಬಸಮ್ಮ, ಶ್ರೀದೇವಿ, ತನುಶ್ರೀ, ಕಿರಣ್, ಅನುಸೂಯಮ್ಮ, ರಾಜೇಶ್ವರಿ ಉಪಸ್ಥಿತರಿದ್ದರು.
ಎಲ್ಲಮ್ಮ ನಗರ ಸರ್ಕಾರಿ ಉರ್ದು ಶಾಲೆ : ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಣ ಪ್ರೇಮಿ ದಾದಾಪೀರ್, ಬಡ್ತಿ ಮುಖ್ಯ ಶಿಕ್ಷಕರಾದ ಶ್ರೀಮತಿ ಇಶ್ರತ್, ಎಸ್‌ಡಿಎಂಸಿ ಉಪಾಧ್ಯಕ್ಷ ತಯ್ಯಬ್ ಅಹ್ಮದ್, ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು. ಶ್ರೀಮತಿ ಶಾತಾಜ್ ಕಾರ್ಯಕ್ರಮ ನಿರೂಪಿಸಿದರು. ನಾಜಿಮಾ ಖಾನಂ ಪ್ರಾರ್ಥಿಸಿದರು. ಶ್ರೀಮತಿ ಶಾಹಿನ್ ಪರ್ವಿನ್ ಸ್ವಾಗತಿಸಿದರು. ಸೈರಾಬಾನು ವಂದಿಸಿದರು.
ಡಾ. ಎಸ್.ಎಸ್.ಎನ್.ಪಿ. ಶಾಲೆ : ಬಾಪೂಜಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಮಂಜುನಾಥ ರಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿಎಸ್ಎಫ್ ಅಕಾಡೆಮಿ ಟ್ರೈನಿಂಗ್ ಇನ್‌ಸ್ಟ್ರಕ್ಟರ್ ಕೆ.ಆರ್. ಮಂಜಾನಾಯ್ಕ ಉಪಸ್ಥಿತರಿದ್ದು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀಮತಿ ಕಮಲ ಬಿ. ನಾರಾಯಣ್ ಉಪಸ್ಥಿತರಿದ್ದರು.
ಮಾತೃಶ್ರೀ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ : ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಯೋಗೇಶ್, ಲಕ್ಷ್ಮಿ, ಆಂಜನೇಯ ಉಪಸ್ಥಿತರಿದ್ದು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷರು, ಡಿಎಸ್ಎಸ್ ಸ್ವಯಂ ಸೇವಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಕುಲ್ಸುಂ ಶಾಲೆ : ಸಂಸ್ಥೆಯ ಅಧ್ಯಕ್ಷ ಮಹ್ಮದ್ ಜುಬೇರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರಾದ ರಜ್ವಿಖಾನ್, ಆರ್.ಎಸ್. ಸಿಂಗ್, ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ನಲ್ಕುಂದ (ದಾವಣಗೆರೆ ತಾಲ್ಲೂಕು)
ದೀಪಾ ಕಾನ್ವೆಂಟ್ : ಶಾಲೆಯ ಕಾರ್ಯದರ್ಶಿ, ಕೆಪಿಸಿಸಿ ಓಬಿಸಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಹಾಲೇಶ್ ಧ್ವಜಾರೋಹಣ ನೆರವೇರಿಸಿದರು.
ಕಾಡಜ್ಜಿ (ದಾವಣಗೆರೆ ತಾಲ್ಲೂಕು)
ಗ್ರಾಮ ಪಂಚಾಯ್ತಿ : ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಜ್ಯೋತಿಬಾಯಿ ಲಿಂಗಾನಾಯ್ಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಉಪಾಧ್ಯಕ್ಷರಾದ ಶ್ರೀಮತಿ ಸಿದ್ದೀಕ್ ಬಾನು ಜಾಹೀರಾಲಿ, ಗ್ರಾ.ಪಂ. ಸದಸ್ಯರುಗಳಾದ ಶ್ರೀಮತಿ ಶೈಲಜಾ ಬಸವರಾಜ್, ಈರಣ್ಣ, ಆರ್. ಉಮೇಶಯ್ಯ, ಶ್ರೀಮತಿ ಕಮಲಮ್ಮ, ಕೆಂಚಪ್ಪ, ಗೀತಮ್ಮ, ದೇವರಾಜನಾಯ್ಕ, ಆರ್. ಮಂಜಮ್ಮ, ವೇದಮೂರ್ತಿ, ಸಿದ್ದೇಶ್, ರತ್ನಮ್ಮ, ಎಸ್. ನಾಗರಾಜ್, ಜೆ. ನಾಗಮ್ಮ, ಶಬ್ಬೀರ್ ಸಾಬ್, ಮಾರಮ್ಮ, ಪಿಡಿಓ ನಾಗರಾಜ್, ಕಾರ್ಯದರ್ಶಿ ಬಸವರಾಜ್ ಮತ್ತಿತತರರು ಉಪಸ್ಥಿತರಿದ್ದರು.
ಎಲೆಬೇತೂರು
ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ಶ್ರೀ ತರಳಬಾಳು ಹಿರಿಯ ಪ್ರಾಥಮಿಕ ಶಾಲೆ : ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎಂ. ಬಸವರಾಜಪ್ಪ ಧ್ವಜಾರೋಹಣ ನೆರವೇರಿಸಿದರು. ಹೆಚ್. ಬಸವರಾಜಪ್ಪ, ಟಿ. ರಾಜಣ್ಣ, ಬಿ. ವಿರೂಪಾಕ್ಷಪ್ಪ, ಮರುಳಸಿದ್ದಪ್ಪ, ಬಿ. ಪ್ರಭು, ಎಂ. ಷಡಕ್ಷರಪ್ಪ, ಆರ್.ಜಿ. ನರೇಂದ್ರ, ಕೊಟ್ರೇಶ್, ಬಿ.ಜಿ. ಸಂಗನಗೌಡರು, ನಾರದಮುನಿಗೌಡರು, ಅಶೋಕ್ ಮರಡಿ, ಹಳ್ಳಿಕೆರೆ ರಾಜಣ್ಣ, ಚೇತನ್‌ಕುಮಾರ್, ಎಂ.ಬಿ. ಪ್ರೇಮಾ, ಬಿ.ಎಂ. ಶಶಿಕಲಾ, ವಿಶ್ವಬಂಧು ಪೆಟ್ರೋಲ್ ಬಂಕ್‍ನ ಮಾಲೀಕರಾದ ಮರುಳಸಿದ್ಧಪ್ಪ ಉಪಸ್ಥಿತರಿದ್ದರು. ಟಿ.ಆರ್. ಪೂಜಾ, ವಿ.ಎಸ್. ಅನುಷಾ ಕಾರ್ಯಕ್ರಮ ನಡೆಸಿಕೊಟ್ಟರು. ಸಹನಾ, ನೇಹಾ ವಂದಿಸಿದರು ಉಷಾ ಪ್ರಾರ್ಥಿಸಿದರು.
ಕುರ್ಕಿ
ಸರ್ಕಾರಿ ಪ್ರೌಢಶಾಲೆ : ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕೆ.ವಿ. ಓಂಕಾರಪ್ಪ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಸಿ.ಜಿ. ಜಗದೀಶ್ ಕೂಲಂಬಿ, ಗ್ರಾಮದ ಹಿರಿಯ ಮುಖಂಡ ಓದೋಗೌಡ್ರ ರೇವಣಸಿದ್ದಪ್ಪ ಉಪಸ್ಥಿತರಿದ್ದು ಮಾತನಾಡಿದರು. ಶ್ರೀಮತಿ ಮೀರಾ ಕೆ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಸ್‌ಡಿಎಂಸಿ ಸಮಿತಿ ಸದಸ್ಯರಾದ ಕೆ.ಜೆ. ನಾಗರಾಜ್, ಕೆ.ಎಸ್. ಚನ್ನಬಸಪ್ಪ, ಕಳಸಪ್ಪ, ಕೆ.ಎಂ. ಮಂಜುನಾಥಯ್ಯ, ಎ.ಎಂ. ಸಿದ್ದೇಶ್, ಶಾಲಾ ಶಿಕ್ಷಕರಾದ ರಾಘವೇಂದ್ರ, ಪ್ರಕಾಶ್, ಮಹ್ಮದ್ ರಫೀ, ನಾಗರಾಜ್ ಉಪಸ್ಥಿತರಿದ್ದರು. ಛಾಯಾಂಕ ಪ್ರಾರ್ಥಿಸಿದರು. ಶಕುಂತಲಾ ಸ್ವಾಗತಿಸಿದರು. ಪಾರ್ವತಮ್ಮ ನಿರೂಪಿಸಿದರು. ಶಿಕ್ಷಕ ವಿರೂಪಾಕ್ಷಿ ವಂದಿಸಿದರು.
ಹರಿಹರ
ಎಸ್‌ಜೆಸಿಪಿಎಸ್ ಶಾಲೆ : ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯದ ಹಬ್ಬ ಹಾಗೂ ದೇಶದ ಸ್ವಾತಂತ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಸ್ಮರಿಸುವ ಮೂಲಕ ಗೌರವ ಅರ್ಪಿಸಲಾಯಿತು. ನಂತರ ನಗರದ ಮಹಾತ್ಮಗಾಂಧಿ ಮೈದಾನಕ್ಕೆ ವಿದ್ಯಾರ್ಥಿಗಳು ತೆರಳಿ, ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿ – ನೃತ್ಯ ಮಾಡಿದರು, ಮುಖ್ಯ ಶಿಕ್ಷಕಿ ವೇದ, ಎಸ್.ಜೆ.ಸಿ.ಪಿ.ಎಸ್ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಎಂಕೆಇಟಿ ಸಿಬಿಎಸ್ಇ ಶಾಲೆ : ಶಾಲೆಯ ಆಡಳಿತಾಧಿಕಾರಿ ಡಾ. ಬಿ.ಟಿ. ಅಚ್ಯುತ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶಾಲೆಯ ಪ್ರಾಂಶುಪಾಲ ಮಂಜುನಾಥ ಕುಲಕರ್ಣಿ ವ್ಯಸನಮುಕ್ತ ಸಮಾಜದ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀಮತಿ ಅರ್ಚನಾ ಮುಳಗುಂದ್, ಗುರುಮೂರ್ತಿ ಉಪಸ್ಥಿತರಿದ್ದರು. ಸಂಗೀತ ಸಂಘದ ಹರ್ಷಿತ್ ಚಲವಾದಿ ಮತ್ತು ತಂಡದವರು ಪ್ರಾರ್ಥಿಸಿದರು. ಟಿ. ಐಶ್ವರ್ಯ ಸ್ವಾಗತಿಸಿದರು. ವಿನಯ್ ವಂದಿಸಿದರು. ಎಂ. ನಿಖಿತಾ, ಪಾವನಿ ಜಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಾಣೇಬೆನ್ನೂರು
ಮಾತಾ ಆಂಗ್ಲ ಮಾಧ್ಯಮ ಶಾಲೆ : ಶಾಲಾ ಸದಸ್ಯ ಮಂಜುನಾಥ ಕೊಪ್ಪದ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಶಾಲಾ ಅಧ್ಯಕ್ಷ ಬಿ.ಹೆಚ್. ಮಡ್ಲೂರ, ಉಪಾಧ್ಯಕ್ಷ ಅಶೋಕ ಪೂಜಾರಿ, ಸದಸ್ಯರಾದ ಲತಾ, ವಿಶ್ವನಾಥ ಕಮ್ಮಾರ, ಶಂಭುನಾಥ ಕೋಟೂರ, ಮಹ್ಮದ್ ರಫೀಕ್, ಶಾಲಾ ಮುಖ್ಯಸ್ಥ ಚನ್ನಬಸಪ್ಪ, ಶಿಕ್ಷಕರಾದ ನಾಗೇಂದ್ರಪ್ಪ ಮಡಿವಾಳರ, ಪ್ರವೀಣಗೌಡ, ಶಿಕ್ಷಕಿಯರಾದ ಪುಷ್ಪಲತಾ ಉಜ್ಜೇರ, ಆಶಾ, ಚೈತ್ರಾ, ದೀಪಾ, ಅನಿತಾ, ಮಮತಾ, ಐಶ್ವರ್ಯ, ಗೀತಾ ಉಪಸ್ಥಿತರಿದ್ದರು.