ದಾವಣಗೆರೆ, ಆ. 21- `ಶುದ್ದ ಗಾಳಿ, ಮಳೆ ನಂದನ ವನವೇ ಇಳೆ, ಹೂ ಹಸಿರಿನ ತಾಕತ್ತು, ಹಸಿರಿದ್ದರೆ ಉಸಿರು ನಿಲ್ಲುವುದು ತಿಳಿದುಕೋ ಈ ಹೊತ್ತು’ ಎಂಬ ನಾಣ್ಣುಡಿಯಂತೆ ನಗರದ ಶ್ರೀಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ವಸತಿಯುತ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಟ್ರೂಪ್ ವತಿಯಿಂದ ಮಿಟ್ಲಕಟ್ಟೆ ಗ್ರಾಮದಲ್ಲಿ 78 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ 450 ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಪ್ರಾಂಶುಪಾಲ ಬಿ.ಆರ್. ಅಶೋಕ್ ಮಾತನಾಡಿ, ಗಿಡ, ಮರಗಳು ಮನುಷ್ಯನಿಗೆ ಎಷ್ಟು ಅವಶ್ಯಕ ಮತ್ತು ಅವುಗಳನ್ನು ಬೆಳೆಸಿ ಮತ್ತು ಪೋಷಿಸುವ ಕರ್ತವ್ಯವೂ ನಮ್ಮದೇ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಸ್ಥೆಯ ಡೀನ್ ಸಿಲ್ಜಿ ಜೋಸ್, ಸ್ಕೌಟ್ಸ್ ಮಾಸ್ಟರ್ ಮಹಾಂತೇಶ್ ನಾಯ್ಕ್ ಮತ್ತು ಗೈಡ್ಸ್ ಕ್ಯಾಪ್ಟನ್ ಮಮತ ಹೆಚ್.ಎಂ., ಮಿಟ್ಲಕಟ್ಟೆ ಗ್ರಾಮದ ಮುಖ್ಯಸ್ಥರು ಹಾಗೂ ಎಲ್ಲಾ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಸಲಾಯಿತು.