ಹರಿಹರ, ಆ,21- ಹರಿಹರ ನಗರವು ತುಂಗಭದ್ರಾ ನದಿಯ ತಟದಲ್ಲಿದ್ದರೂ ಬೇಸಿಗೆ ಕಾಲದಲ್ಲಿ ನೀರಿನ ದಾಹಕ್ಕೆ ತುತ್ತಾಗುತ್ತದೆ. ಆದ್ದರಿಂದ ಈ ಸಮಸ್ಯೆ ಹೋಗಲಾಡಿಸಲು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಕುಡಿಯುವ ನೀರಿನ ಶೇಖರಣಾ ಘಟಕ ಸ್ಥಾಪಿಸುವಂತೆ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ನೀಲನಕ್ಷೆ ನೀಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮಲೇಬೆನ್ನೂರು ಕಾಂಗ್ರೆಸ್ ಮುಖಂಡ ಕೆ.ಪಿ. ಗಂಗಾಧರ್, ಪಕ್ಷದ ಸದಸ್ಯರಾದ ಆರೀಫ್ ಅಲಿ, ನಯಾಜ್ ಆಹ್ಮದ್, ಚಮನ್ ಷಾ, ನಜೀರ್ ಹುಸೇನ್, ಶಿವನಹಳ್ಳಿ ಡಾ. ರೇವಣಸಿದ್ದಪ್ಪ ಇತರರಿದ್ದರು.
December 28, 2024