ಅರಣ್ಯ ಹಕ್ಕು ಸಮಿತಿ ಸಭೆ ಕರೆಯಲು ರೈತರ ಆಗ್ರಹ

ಅರಣ್ಯ ಹಕ್ಕು ಸಮಿತಿ ಸಭೆ ಕರೆಯಲು ರೈತರ ಆಗ್ರಹ

ದಾವಣಗೆರೆ, ಆ. 21- ಕೂಡಲೇ ಅರಣ್ಯ ಹಕ್ಕು ಸಮಿತಿ ಸಭೆ ಕರೆದು ಹಕ್ಕುಪತ್ರಗಳನ್ನು ನೀಡಬೇಕು. ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಅಧಿನಿಯಮ 2006 ಕ್ಕೆ 75 ವರ್ಷಗಳ ಸಾಕ್ಷಿ ದಾಖಲೆ ಇರುವ ಕಾನೂನನ್ನು 25 ವರ್ಷಗಳಿಗೆ ಇಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ದಾವಣಗೆರೆ ತಾಲ್ಲೂಕು ಆಂಜನೇಯ ನಗ ರದ ನಿವೇಶನಗಳಿಗೆ ಇ-ಸ್ವತ್ತು ಮಾಡಿಕೊಡಬೇಕು. ಜಿಲ್ಲೆಯಲ್ಲಿ ಬಗರ್ ಹುಕ್ಕುಂ ಸಮಿತಿಗಳನ್ನು ಕೂಡಲೇ ರಚಿಸಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ಸೇರಿ ಎಲ್ಲಾ ಅರ್ಜಿದಾರರಿಗೂ ಹಕ್ಕುಪತ್ರಗಳನ್ನು ನೀಡಬೇಕು. ನಿರಾಶ್ರಿತರಿಗೆ ತಕ್ಷಣ ಮನೆ ನಿರ್ಮಿಸಿ ಕೊಡಬೇಕು. ಹಾಳಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕೆಂಬ ಇತರೆ ಬೇಡಿಕೆಗಳನ್ನು ಈಡೇರಿ ಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ್, ಯಲೋದಹಳ್ಳಿ ರವಿಕುಮಾರ್, ಕಡಾರನಾಯಕನಹಳ್ಳಿ ಪ್ರಭುಗೌಡ, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಳ್ಳಿ ರಾಜು, ಹೂವಿನಮಡು ನಾಗರಾಜ್, ಅಸ್ತಾಫನಹಳ್ಳಿ ಗಂಡುಗಲಿ, ಚಿಕ್ಕಕೋಗಲೂರು ಕುಮಾರ್, ಆಲೂರು ಪರಶುರಾಮ್, ಕುರ್ಕಿ ಹನುಮಂತ, ಹುಚ್ಚವ್ವನಹಳ್ಳಿ ಪ್ರಕಾಶ್, ರುದ್ರಪ್ಪ, ಗುಮ್ಮನೂರು ರುದ್ರೇಶ್, ತಿಪ್ಪೇರುದ್ರಪ್ಪ, ಶಿವಪುರ ಕೃಷ್ಣಮೂರ್ತಿ, ಶಿವಕುಮಾರ್, ಕೆ.ಎಸ್. ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು. 

error: Content is protected !!