ದಾವಣಗೆರೆ, ಆ.21- ನಗರದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯ 60ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಪ್ರಯುಕ್ತ ಹಮ್ಮಿಕೊಳ್ಳಲು ಉದ್ದೇಶಿಸಿರುವ ವಜ್ರ ಮಹೋತ್ಸವ ಸಂಭ್ರಮದ ಲಾಂಛನವನ್ನು ಅನಾವರಣಗೊಳಿ ಸಲಾಯಿತು.
ದೃಶ್ಯ ಕಲ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹರೀಶ್ ಆಚಾರ್ ಎನ್ನುವವರು ರಚಿಸಿದ ಲಾಂಛನ ಆಯ್ಕೆಯಾಗಿ ಅನಾವರಣಗೊಂಡಿದೆ.
ಈ ಸಂದರ್ಭದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈ ರಾಜ್ ಚಿಕ್ಕ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಪಿ ವಲ್ಲೇಪುರೆ, ಬೋಧನಾ ಸಹಾಯಕರುಗಳಾದ ಡಾ. ಸಂತೋಷ್ ಕುಲಕರ್ಣಿ, ಡಾ. ಗಿರೀಶ್ ಕುಮಾರ್, ದತ್ತಾತ್ರೇಯ ಭಟ್ಟ, ಸುರೇಶ್ ಡಿ.ಎಚ್., ಶಿವಶಂಕರ್ ಸುತಾರ್, ಹರೀಶ್ ಹೆಡ್ನವರ್, ಪ್ರಮೋದ ಕೆ. ವಿ. ನವೀನ್ ಕುಮಾರ್, ಕಚೇರಿ ನೌಕರರಾದ ನಂದಕುಮಾರ್, ಶಿವಕುಮಾರ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.