ಡಾ. ಶಿವಮೂರ್ತಿ ಶ್ರೀಗಳೇ ಸಿರಿಗೆರೆ ಮಠಕ್ಕೆ ಮುಂದುವರೆಯಲಿ

ಡಾ. ಶಿವಮೂರ್ತಿ ಶ್ರೀಗಳೇ ಸಿರಿಗೆರೆ ಮಠಕ್ಕೆ ಮುಂದುವರೆಯಲಿ

ರಕ್ತದಲ್ಲಿ ಸಹಿ ಮಾಡಿ ಪತ್ರ ಬರೆದು ಮಠಕ್ಕೆ ಕಳುಹಿಸಿದ ಹೆಮ್ಮನಬೇತೂರು ಗ್ರಾಮದ ಭಕ್ತರು

ದಾವಣಗೆರೆ,ಆ.20-  ಸಿರಿಗೆರೆಯ ಶ್ರೀ ತರಳಬಾಳು ಮಠದ ಜಗದ್ಗುರುಗಳಾಗಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಅವರೇ ಮುಂದುವರೆಯಬೇಕು ಎಂದು ತಾಲ್ಲೂಕಿನ ಹೆಮ್ಮನಬೇತೂರು ಗ್ರಾಮದ ಭಕ್ತರು ಆಗ್ರಹಿಸಿದ್ದಾರೆ.

ಈ ಕುರಿತು ಗ್ರಾಮದಲ್ಲಿ ಸಭೆ ನಡೆಸಿರುವ ಭಕ್ತರು, ಶ್ರೀಗಳೇ ಪೀಠದಲ್ಲಿ ಮುಂದುವರಿಯಬೇಕೆಂದು ಒಮ್ಮತದಿಂದ ನಿರ್ಣಯ ತೆಗೆದುಕೊಂಡು ರಕ್ತದಲ್ಲಿ ಸಹಿ ಮಾಡಿ ಮಠಕ್ಕೆ ಪತ್ರ ಕಳುಹಿಸಿಕೊಟ್ಟಿದ್ದಾರೆ.

ಶ್ರೀಗಳ ವಿರುದ್ಧ ವಿರುದ್ಧ ಇಷ್ಟು ದಿನ ಇಲ್ಲದ ಗೊಂದಲ, ಸುಳ್ಳು ಆರೋಪ, ಪಿತೂರಿ ಈಗ ಹೆಚ್ಚಾಗಿ ನಡೆಯುತ್ತಿದೆ. ನಾವೆಲ್ಲರೂ ಶ್ರೀ ಗಳ ಪರ ನಿಲ್ಲುವ ಮೂಲಕ ಸರಿಯಾದ ಉತ್ತರ ನೀಡೋಣ ಎಂದು ಗ್ರಾಮಸ್ಥರು ತಿಳಿಸಿದರು.

ಸ್ವಾಮೀಜಿ ಅವರು ಹೆಮ್ಮಬೇತೂರು ಸೇರಿದಂತೆ ಸುತ್ತಮುತ್ತ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಆಧುನಿಕ ಭಗೀರಥರು. ಅವರಿಂದ ಕಾರ್ಯಗತ ಗೊಂಡಿರುವ 20 ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೆರೆಗಳಿಗೆ ನೀರು ತುಂಬಿದಂತಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಸಭೆಯಲ್ಲಿ ಎಸ್. ಆರ್. ಪ್ರಕಾಶ್, ನಾಗರಾಜಪ್ಪ, ಎಸ್. ಎನ್. ಕಲ್ಲೇಶಪ್ಪ, ಎನ್. ಎಂ. ಪ್ರಸನ್ನ, ಎಸ್. ಬಸವರಾಜ್, ಬಿ. ಎಸ್. ಸಚಿನ್, ಪಂಪಣ್ಣ, ಸಿ. ಎಸ್. ಪ್ರಕಾಶ, ಹೆಚ್. ಆರ್. ಶಿವಕುಮಾರ, ಇ. ರಮೇಶ, ಕರಿಬಸಣ್ಣ, ಎಸ್. ಎಸ್. ಸೋಮಶೇಖರ್, ಯು. ಆರ್. ಎಸ್. ಶ್ರೀನಿವಾಸ್, ಜಿ ಎಸ್ ರಾಜಶೇಖರ್, ತಿಪ್ಪೇಸ್ವಾಮಿ, ಪರಿಶಿಷ್ಟ ಪಂಗಡ ಸಮಾಜದ ಮುಖಂಡ ಟಿ ಡಿ ರಮೇಶ್, ಬಕ್ಕೇಶ್ ಮತ್ತಿತರರು ಹಾಜರಿದ್ದರು.

error: Content is protected !!