ಮಲೇಬೆನ್ನೂರು, ಆ. 20 – ಧೂಳೆಹೊಳೆ ಗ್ರಾಮದ ಜಿಎಂಸಿಜಿ ಪ್ರೌಢ ಶಾಲೆಯಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ, ಕನ್ನಡ ಭಾಷಾ ಶಿಕ್ಷಕ ಟಿ.ಶಶಿಧರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ದಾವಣಗೆರೆಯ ಲಲಿತ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿರುವ ಟಿ. ಶಶಿಧರ್ ಅವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪೂರ್ಣಾಂಕ ಗಳಿಸಲು ಉತ್ತಮ ಮಾರ್ಗದರ್ಶನ ಮಾಡಿರುವುದನ್ನು ಗಮನಿಸಿರುವ ಮೈಸೂರಿನ ಪರೀಕ್ಷಾ ಸ್ಫೂರ್ತಿ ಫೌಂಡೇಷನ್ ಇವರು ರಾಜ್ಯ ಮಟ್ಟದ ಶಿಕ್ಷಕ ಸಾಧಕ ರತ್ನ ಪ್ರಶಸ್ತಿ ನೀಡಿದ್ದಾರೆ.
January 10, 2025