ಸಮವಸ್ತ್ರ ಸಮಾನತೆಯ ಸಂಕೇತ : ಡಾ. ನಾ ಲೋಕೇಶ ಒಡೆಯರ್

ಸಮವಸ್ತ್ರ ಸಮಾನತೆಯ ಸಂಕೇತ :  ಡಾ. ನಾ ಲೋಕೇಶ ಒಡೆಯರ್

ಆನಗೋಡು, ಆ. 20- ವಿದ್ಯಾರ್ಥಿ ಸಂಘಗಳು ಮಕ್ಕಳಲ್ಲಿರುವ  ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸುವ  ವೇದಿಕೆಯಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ. ನಾ ಲೋಕೇಶ ಒಡೆಯರ್ ತಿಳಿಸಿದರು.

ಇಲ್ಲಿನ ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಉಚಿತ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ. ಲೋಕೇಶ ಒಡೆಯರ್ ಮಾತನಾಡಿದರು. 

ಸ್ವಾತಂತ್ರ್ಯ,  ಸಮಾನತೆ, ಸೌಹಾರ್ದತೆಯು ಭಾರತ ಸಂವಿಧಾನದ ಆಶಯಗಳಾಗಿವೆ. ಅದರಂತೆ ಶಾಲಾ ಮಕ್ಕಳಲ್ಲಿ   ಸಮಾನತೆ, ಸೌಹಾರ್ಧತೆಯ ವಾತಾವರಣ  ಮೂಡಿಸಲು ಸಮವಸ್ತ್ರ ಕಾರಣವಾಗಿದೆ. ಉಸಿರು ಕಟ್ಟುವಂತಹ ವಾತಾವರಣದಲ್ಲಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ನೆರೆಹೊರೆಯವರನ್ನು ಪ್ರೀತಿಸಬೇಕು,  ಇಲ್ಲವಾದರೆ ಸಹಿಸಿಕೊಳ್ಳುವ 

ಗುಣವನ್ನಾದರೂ ರೂಢಿಸಿಕೊಳ್ಳಬೇಕು. ವಿದ್ಯೆಯ ಜೊತೆಗೆ ಅರಿವು ಇರಬೇಕು. ಕೇವಲ ಅಂಕ ಗಳಿಕೆಗೆ  ಓದು ಸೀಮಿತವಾಗಬಾರದು  ಎಂದು ಲೋಕೇಶ ಒಡೆಯರ್ ಕಿವಿ ಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾ ಧ್ಯಾಯ ಎಚ್. ರವಿ ವಹಿಸಿದ್ದರು.  ನಂದಿ ಕನಸ್ಟ್ರಕ್ಷನ್ ಸಂಸ್ಥೆಯ ಅಭಿನಂದನ್ ಮತ್ತು ಜಿ ಚಂದ್ರಶೇಖರ, ಶಿಕ್ಷಕರಾದ ಎಚ್.ಸಿ. ವೇದಮೂರ್ತಿ, ಡಾ. ವಿಜಯ ಕುಮಾರ್, ಜಿ ಸುವರ್ಣ, ಕೆ.ಎಸ್. ಮಮತ, ಬಿ.ಎಚ್ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು. 

ಶಿಕ್ಷಕ ಎಚ್. ಎನ್. ನಾಗರಾಜ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ದಾನಿಗಳಿಂದ 130 ವಿದ್ಯಾರ್ಥಿಗಳಿಗೆ  ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು. 

error: Content is protected !!