ಹರಿಹರ : ಸಮಾಜಮುಖಿ ಸೇವೆಯಾಗಿ ಧರ್ಮಸ್ಥಳದ ಸಿರಿಧಾನ್ಯ

ಹರಿಹರ : ಸಮಾಜಮುಖಿ ಸೇವೆಯಾಗಿ ಧರ್ಮಸ್ಥಳದ ಸಿರಿಧಾನ್ಯ

ಹರಿಹರ, ಆ. 20 –  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಡಿ ಡಾ ವೀರೇಂದ್ರ ಹೆಗ್ಗಡೆಯವರು ಸಿರಿಧಾನ್ಶಗಳಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರಿಗೆ ಹಾಗೂ ಸಮಾಜಕ್ಕೆ ಅನುಕೂಲ ಆಗುವಂತೆ ಸಮಾಜ ಸೇವೆಯ ನೆಲೆಯಲ್ಲಿ ಈ ಯೋಜನೆ ಹಮ್ಮಿಕೊಂಡಿರುವುದು ಶ್ಲ್ಯಾಘನೀಯ ಎಂದು ಸ್ಥಳೀಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಸ್ವಾಮೀಜಿ ಹೇಳಿದರು. 

ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಶ ಅತಿಥಿಯಾಗಿದ್ದ ಧರ್ಮಸ್ಥ ಗ್ರಾಮಾಭಿವೃದ್ಧಿ ಯೋಜನೆಯ ಸಿರಿಧಾನ್ಶ ಕಾರ್ಯಕ್ರಮ ನಿರ್ದೇಶಕ ಎಂ.ದಿನೇಶ್ ಮಾತನಾಡಿ, ಸಿರಿಧಾನ್ಶ   ಆಹಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದ್ದು, ಮಾತೃಶ್ರೀ ಡಾ ಹೇಮಾವತಿ ಅಮ್ಮನವರ ಅಧ್ಶಕ್ಷತೆಯ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಿರಿಧಾನ್ಶ ಬೆಳೆ ರೈತರಲ್ಲಿ ಸಂಘಟನೆ, ಸಿರಿಧಾನ್ಶಗಳ ಸಂಸ್ಕರಣೆ, ಸಿರಿಧಾನ್ಶ ಆಹಾರ ಸಂಶೋಧನಾಲಯ, ಸಿರಿಧಾನ್ಶ ಮೌಲ್ಶವರ್ಧನೆ, ಸಿರಿಧಾನ್ಶ ಆರೋಗ್ಶ ವರ್ಧಕ ಆಹಾರಗಳ ಬಿಡುಗಡೆ ಇತ್ಶಾದಿಗಳ ಮೂಲಕ ಮಾದರಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಪಂಚಮಸಾಲಿ ಪೀಠದ ಧರ್ಮ ದರ್ಶಿ ಚಂದ್ರಶೇಖರ್ ಪೂಜಾರ್ ಮಾತನಾಡಿ ಸಮಾಜಕ್ಕೆ ಪೌಷ್ಟಿಕ ಆಹಾರಗಳನ್ನು ಒದಗಿಸುವುದೇ ಈ ಸಿರಿ ಮಿಲೆಟ್ ಹೌಸ್ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಶಕ್ಷ ಹೊನ್ನಾಳಿ ಬಾಬಣ್ಣ, ಯೋಜನಾಧಿಕಾರಿ ಶ್ರೀಮತಿ ನಂದಿನಿ ಶೇಠ್, ಯೋಜನೆಯ ಕೃಷಿ ಅಧಿಕಾರಿ ರಮೇಶ್ ಮತ್ತು ಇತರರು  ಉಪಸ್ಥಿತರಿದ್ಧರು.

error: Content is protected !!