ಅಭಿನವ ಕೃಪಾನಂದ ಭಾರತಿ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮಿ ಮಠಕ್ಕೆ ನೂತನ ಪೀಠಾಧಿಪತಿ

ಅಭಿನವ ಕೃಪಾನಂದ ಭಾರತಿ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮಿ ಮಠಕ್ಕೆ ನೂತನ ಪೀಠಾಧಿಪತಿ

ಹರಿಹರ, ಆ. 20-  ನಗರದ  ಬ್ರಹ್ಮಾನಂದ ಸ್ವಾಮಿ ಮಠಕ್ಕೆ ನೂತನ ಪೀಠಾಧಿಪತಿಯಾಗಿ ಶ್ರೀ ಅಭಿನವ ಕೃಪಾನಂದ ಭಾರತಿ ಸ್ವಾಮೀಜಿಯವರನ್ನು ಪೀಠಾರೋಹಣ ಮಾಡಲಾಯಿತು.

ಸಿದ್ಧಾರೂಢ ಪರಂಪರೆ ಹೊಂದಿರುವ ಶ್ರೀ ಬ್ರಹ್ಮಾನಂದ ಸ್ವಾಮಿ ಮಠದಲ್ಲಿ  ಬ್ರಹ್ಮಾನಂದ ಸ್ವಾಮೀಜಿ ಹಾಗೂ ಶ್ರೀ ದೊಡ್ಡಮ್ಮನವರ, ಶ್ರೀ ಕೃಪಾನಂದ ಭಾರತಿ ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ ಶ್ರೀಮಠದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಇದೇ ಸಂದರ್ಭದಲ್ಲಿ ಅರುಣ್ ಸಿದ್ದೇಶ್ವರ ಸ್ವಾಮೀಜಿಯವರಿಗೆ ಐರಣಿ  ಶ್ರೀಮಠದ ಬಸವ ಕೇಂದ್ರ ಸ್ವಾಮೀಜಿಯವರಿಗೆ ಅಭಿನವ ಕೃಪಾನಂದ  ಭಾರತಿ ಸ್ವಾಮೀಜಿ ಎಂದು‌ ನಾಮಕರಣ ಮಾಡಿ, ನಂತರ ಬ್ರಹ್ಮಾನಂದ ಸ್ವಾಮಿ ಮಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಲಾಯಿತು. 

ಗೀತಮ್ಮ ತಾಯಿ ಪ್ರಾರ್ಥಿಸಿದರು. ಹದಡಿ ಚಂದ್ರಗಿರಿ ಮಠದ ಶ್ರೀ ಮುರುಳೀಧರ ಸ್ವಾಮೀಜಿಯವರು ಅಭಿನವ ಕೃಪಾ ನಂದ ಭಾರತಿ ಸ್ವಾಮಿಗಳಿಗೆ ಶ್ರೀಮಠದ ಲಾಂಛನವಾದ ಜೋಳಿಗೆ, ಬೆತ್ತ ನೀಡುವ ಮೂಲಕ ನೂತನ ಶ್ರೀಗಳಿಗೆ ಶ್ರೀಮಠದ ಭಕ್ತರ ಸಮೂಹದಲ್ಲಿ ಹಸ್ತಾಂತರಿಸಿ, ಆಶೀರ್ವದಿಸಿದರು. ಜಗದ್ಗುರು ಶ್ರೀ ಪ್ರಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.  

ಹದಡಿ ಚಂದ್ರಗಿರಿ ಮಠದ ಶ್ರೀ ಮುರಳೀಧರ ಸ್ವಾಮೀಜಿ  ಮಾತನಾಡಿ,  ಶ್ರೀ ಅಭಿನವ ಕೃಪಾನಂದ ಭಾರತಿ  ಸ್ವಾಮಿಗಳು ನಿರಂತರ ಶ್ರೀಮಠದ ಭಕ್ತರೊಂದಿಗೆ ಸಂಪರ್ಕದಲ್ಲಿರುವಂತೆ ತಿಳಿಸಿದರು. 

ಶ್ರೀ ಪ್ರಿಯಾನಂದ ಸ್ವಾಮೀಜಿ‌ ಮಾತನಾಡಿ, ಅಭಿನವ ಕೃಪಾನಂದ ಶ್ರೀಗಳು ಶ್ರೀಮಠದ ಕಳಸ ಪ್ರಾಯವಾಗಲಿ ಎಂದು ಆಶಿಸಿದರು. 

ಶ್ರೀಮಠದ ಆಡಳಿತಾಧಿಕಾರಿಗಳಾದ ಬಿ. ವಿವೇಕಾನಂದ ಸ್ವಾಮಿಗಳು ಶ್ರೀ ಅಭಿನವ ಕೃಪಾನಂದ ಭಾರತಿ ಸ್ವಾಮಿಯವರ ಕಿರು ಪರಿಚಯ ಮಾಡಿದರು. ದೇವಾಂಗ ಸಮಾಜದ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿ, ಅಕ್ಕನ‌ ಬಳಗದ ರೂಪಕ್ಕ, ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ, ಕೆಪಿಸಿಸಿ‌ ಸದಸ್ಯ ಬಿ ರೇವಣಸಿದ್ದಪ್ಪ ಹಾಗೂ ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 

error: Content is protected !!