ರಾಯರ ಆಶೀರ್ವಾದ ಪಡೆದ ಸಂಸದೆ ಡಾ. ಪ್ರಭಾ
ಹರಿಹರ, ಆ.21- ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬುಧವಾರ ರಾಯರ 353ನೇ ಆರಾಧನಾ ಮಹೋತ್ಸವ ಶ್ರದ್ಧಾ – ಭಕ್ತಿಯಿಂದ ಜರುಗಿತು.
ಶ್ರೀ ಗುರು ರಾಯರಿಗೆ ಫಲ ಪಂಚಾಮೃತ ಅಭಿಷೇಕ, ತುಲಾಭಾರ, ಕನಕಾಭಿಷೇಕ, ಪಲ್ಲಕ್ಕಿ ಉತ್ಸವ, ಬೆಳ್ಳಿ ರಥೋತ್ಸವ, ಪವಮಾನ ಹೋಮ ಮತ್ತು ಮಹಾ ಮಂಗಳಾರತಿ ನಡೆಯಿತು ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯಿಂದ ಸಂಸದರನ್ನು ಗೌರವಿಸಲಾಯಿತು.
ಮಠದ ಪ್ರಧಾನ ಅರ್ಚಕ ವರಹಾಚಾರ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ, ಕಾಂಗ್ರೆಸ್ ಮುಖಂಡ ಸುರೇಶ್ ಹಾದಿಮನಿ, ಡಾ. ರಶ್ಮಿ ವೈ. ನಾಗಪ್ಪ, ನಗರಸಭೆ ಸದಸ್ಯರಾದ ಎ. ವಾಮನಮೂರ್ತಿ, ಶಂಕರ್ ಖಟಾವ್ಕರ್, ರಜನಿಕಾಂತ್, ಕೆ.ಜಿ. ಸಿದ್ದೇಶ್, ಹನುಮಂತಪ್ಪ, ನಾಮನಿರ್ದೇಶನ ಸದಸ್ಯ ಸಂತೋಷ್ ದೊಡ್ಡಮನಿ, ಕೆ.ಬಿ. ರಾಜಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ದೇವಸ್ಥಾನ ಸಮಿತಿಯ ಎ.ಬಿ. ಬಸವರಾಜ್, ಸುಕುಮಾರ್, ಎಸ್. ರಂಗನಾಥ, ಮಂಜುನಾಥ್, ಶೀಧರ್ ಶೆಟ್ಟಿ, ಬಿಜೆಪಿ ಮುಖಂಡರಾದ ಶಿವಪ್ರಕಾಶ್ ಶಾಸ್ತ್ರಿ, ಅಜಿತ್ ಸಾವಂತ್, ಹೆಚ್.ಎಸ್. ರಾಘವೇಂದ್ರ, ಕೋಳೂರು ಪ್ರಕಾಶ್, ಶ್ರೀನಿವಾಸ್ ಮೂರ್ತಿ, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಇರ್ಫಾನ್, ಅರ್ಚಕ ಪವನ್, ಭಜನಾ ಮಂಡಳಿಯ ಮಹಿಳಾ ಸದಸ್ಯರು ಇದ್ದರು.
ವೈದ್ಯರು, ಗಣ್ಯರಿಗೆ ಸನ್ಮಾನ: ಆರಾಧನಾ ಮಹೋತ್ಸವದಲ್ಲಿ ಇಲ್ಲಿನ ಶ್ರೇಯಾ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ರಶ್ಮಿ ಮತ್ತು ಕಾಂಗ್ರೆಸ್ ಮುಖಂಡ ಸುರೇಶ್ ಹಾದಿಮನಿ ಅವರನ್ನು ದೇವಸ್ಥಾನದ ಸಮಿತಿಯಿಂದ ಸನ್ಮಾನಿಸಿ ಗೌರವಿಸಿದರು. ಪ್ರಧಾನ ಅರ್ಚಕ ವರಹಾಚಾರ್, ಸಮಿತಿಯ ಅಧ್ಯಕ್ಷ ಎ.ಬಿ. ಬಸವರಾಜ್, ನಿರ್ದೇಶಕ ಶ್ರೀಧರ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಸುರೇಶ್ ಹಾದಿಮನಿ ದಂಪತಿಗಳು ಇದ್ದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮತ್ತು ನಗರಸಭೆ ಆರೋಗ್ಯ ಅಧಿಕಾರಿ ರವಿಪ್ರಕಾಶ್ ಅವರನ್ನೂ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಇದ್ದರು.