ಹರಿಹರ, ಆ. 21 – ತಾಲ್ಲೂಕಿನ ಕುಂಬಳೂರು ಗ್ರಾಮದ ಗುರು ಕುಲ ಶಾಲಾ ಮೈದಾನದಲ್ಲಿ ನಡೆದ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗ ವಹಿಸಿದ್ದ ಕುಂಬ ಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಶಾಲೆಯ ಬಾಲಕರು ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಂತೆಯೇ ಮಂಗಳವಾರ ದೇವರಬೆಳಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮೈದಾನದಲ್ಲಿ ನಡೆದ ವೈಯಕ್ತಿಕ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಸದರಿ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಗುಂಡು ಎಸೆತದಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಜಯ ಕೀರ್ತನ ದ್ವಿತೀಯ, ತಟ್ಟೆ ಎಸೆತದಲ್ಲಿ ಶ್ರೇಯಸ್ ದ್ವಿತೀಯ ಹಾಗೂ ದಿಗಂತ್ ತೃತೀಯ ಸ್ಥಾನ ಪಡೆದಿದ್ದಾರೆ .
ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಮಾರ್ ಎಸ್, ಪ್ರಾಂಶುಪಾಲ ಚೇತನ್ ಕುಮಾರ್ ಹಂಪಕ್ಕನವರ್, ಉಪ ಪ್ರಾಂಶುಪಾಲರಾದ ಕು. ಅಖಿಲೇಶ್ವರಿ, ಕ್ರೀಡಾ ವ್ಯವಸ್ಥಾಪಕ ವೀರಭದ್ರಾಚಾರ್, ದೈಹಿಕ ಶಿಕ್ಷಕ ಮುತ್ತುರಾಜ್, ತರಬೇತುದಾರ ವಿಕಾಸ್ ಮತ್ತು ಇತರರು ವಿಜೇತರನ್ನು ಅಭಿನಂದಿಸಿದ್ದಾರೆ.