ಮಲೇಬೆನ್ನೂರು, ಆ.21- ಇಲ್ಲಿನ ಎಂ.ಜಿ.ಮೆಹರಾಡೆ ಅಂಡ್ ಸನ್ಸ್ (ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಕೇಂದ್ರ) ವತಿಯಿಂದ ಸ್ವಾತಂತ್ರ್ಯೋತ್ಸವ ನಡೆಯಿತು.
ಲಯನ್ಸ್ ಶಾಲಾ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ರೈತರು, ನಿವೃತ್ತ ಯೋಧರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಮ್ಮು ಖದಲ್ಲಿ ಎಂ.ಜಿ.ಗಜಾನನ ಅವರು ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿದರು.
ಭತ್ತದ ಸಸಿಯಲ್ಲಿ ಭಾರತ ದೇಶದ ನಕ್ಷೆ ತಯಾರು ಮಾಡಿ ಅದಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣ ಹಾಕಿ ಗಮನ ಸೆಳೆಯುವಂತೆ ಮಾಡಿದ್ದರು.
ಈ ವೇಳೆ ಮಾತನಾಡಿದ ಗಜಾನನ ಅವರು, ಕಳೆದ 27 ವರ್ಷಗಳಿಂದಲೂ ನಾವು ನಮ್ಮ ಅಂಗಡಿ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡು ಬಂದಿದ್ದೇವೆ. ಈ ಮೂಲಕ ಸಾರ್ವಜನಿಕರಲ್ಲಿ ದೇಶಾಭಿಮಾನ ಬೆಳೆಸುವ ಪ್ರಯತ್ನ ಮಾಡಿದ್ದೇವೆ. ಸಮಾರಂಭದಲ್ಲಿ ರೈತರನ್ನು, ಯೋಧರನ್ನು, ನಿವೃತ್ತ ಶಿಕ್ಷಕರನ್ನು ಪ್ರತಿವರ್ಷ ಗೌರವಿಸುತ್ತೇವೆ ಎಂದರು.
ಪಿಎಸಿಎಸ್ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಚಂದ್ರಶೇಖರ್ ಹಿರೇಮಠ್, ಡಾ. ಬಸವರಾಜ್ ಕಲಾಲ್, ಬಂದಿಹಾಳ್ ಗಂಗಾಧರ್, ಗುರುರಾಜ್, ಜಿ.ಹೆಚ್.ಲೋಕಪ್ಪ, ಹುಗ್ಗಿ ರಾಮಚಂದ್ರಪ್ಪ, ಕೊಮಾರನಹಳ್ಳಿಯ ಅಜ್ಜಪ್ಪ, ಕೊರ್‌ಟಿಲ್ ಕಂಪನಿಯ ನಾಗರಾಜ್, ಹರೀಶ್, ಹೊಸಳ್ಳಿ ನಾಗರಾಜ್, ಕೆಂಪಣ್ಣ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.