ಹರಿಹರ,ಆ.21- ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನ ಸಮಿತಿ ಹಾಗೂ ಹೊಸಭರಂಪುರ ಯುವಕ ಸಂಘದ ವತಿಯಿಂದ ಹರಿಹರ ಕಾ ರಾಜಾ ಗಣಪತಿ ಮಹೋತ್ಸವದ ಅಂಗವಾಗಿ ಹದರಗಂಬ ಪೂಜೆ ಮಾಡಲಾಯಿತು.
ಈ ವೇಳೆ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಚಂದಪೂರ್ ಮಾತನಾಡಿ, `ಹರಿಹರ ಕಾ ರಾಜಾ ಗಣಪತಿ’ ಜಿಲ್ಲೆಯಲ್ಲಿ ಅತಿ ದೊಡ್ಡ ಗಣಪತಿ ಆಗಿದ್ದು, ಸುಮಾರು 16 ಅಡಿ ಎತ್ತರದಲ್ಲಿ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊಸಭರಂಪುರ ಯುವಕ ಸಂಘದ ಮತ್ತು ಗ್ರಾಮದೇವತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುರೇಶ್ ಚಂದಪೂರ್, ಉಪಾಧ್ಯಕ್ಷ ಎಂ. ಚಿದಾನಂದ ಕಂಚಿಕೇರಿ, ಖಜಾಂಚಿ ಬೆಣ್ಣೆ ರೇವಣಸಿದ್ದಪ್ಪ, ನಿರ್ದೇಶಕ ಹರಪನಹಳ್ಳಿ ಬಸವರಾಜಪ್ಪ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಅಡಕಿ ಕುಮಾರ್, ಭರಂಪುರ ಯುವಕ ಸಂಘದ ಬೆಣ್ಣೆ ಸಿದ್ದೇಶ್, ಡಿಶ್ ಸ್ವಾಮಿ, ಕೆಂಚಪ್ಪ, ಎಂ.ಹೆಚ್. ಚಂದ್ರಶೇಖರ್, ಅರ್ಚಕ ನಾಗರಾಜ್, ವೇದಮೂರ್ತಿ ಹೊಸಳ್ಳಿ, ಸಂಜು ಪೂಜಾರ್, ಸಾಗರ್, ಅರ್ಜುನ್, ರುದ್ರೇಶ್ ದಾವಣಗೆರೆ, ಕಂಚಿಕೇರಿ ಕೆ.ಬಿ. ಶಿವಪ್ರಕಾಶ್, ನಾಗರಾಜ್ ನಾಗೇನಹಳ್ಳಿ, ಗಿರೀಶ್ ಜಿ.ಕೆ, ಕರಿಬಸಪ್ಪ ಸ್ವಾಮಿ, ರಾಖೇಶ್, ಶಿವಾಜಿ ಚೌಗಲೆ, ಸಮರ್ಥ್ ಚಂದಪೂರ್, ಸಿ.ಕೆ. ಗುರುಪ್ರಸಾದ್ ಕಂಚಿಕೇರಿ, ಮಂಜುನಾಥ್ ಕಣದಾಳ, ಹಾವನೂರು ಶಂಭು, ಕೊಟ್ರೇಶಪ್ಪ, ಮನು, ನವೀನ್, ಪವನ್, ಹಾಲೇಶ್ ಹಣಿಗಿ, ಮಂಜುನಾಥ್, ಚೇತನ್ ಮಜ್ಜಿಗೆ, ಮನೋಹರ, ಬೀರೇಶ್ ಇತರರು ಹಾಜರಿದ್ದರು.