ಉಕ್ಕಡಗಾತ್ರಿ : ಸಂಭ್ರಮದ ಅಜ್ಜಯ್ಯನ ಬೆಳ್ಳಿ ರಥೋತ್ಸವ

ಉಕ್ಕಡಗಾತ್ರಿ : ಸಂಭ್ರಮದ ಅಜ್ಜಯ್ಯನ ಬೆಳ್ಳಿ ರಥೋತ್ಸವ

ಮಲೇಬೆನ್ನೂರು, ಆ.19- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಪುಣ್ಯತಿಥಿ ಅಂಗವಾಗಿ ಅಜ್ಜಯ್ಯನ ಬೆಳ್ಳಿ ರಥೋತ್ಸವ ಮತ್ತು ಪಾಲಿಕೋತ್ಸವವು ಸೋಮವಾರ ಶ್ರದ್ಧಾ – ಭಕ್ತಿಯಿಂದ ಜರುಗಿದವು.

ಶ್ರಾವಣ ಮಾಸದ 3ನೇ ಸೋಮವಾರದಿಂದ ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ಕರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ ಮತ್ತು ಲೋಕ ಕಲ್ಯಾಣಾರ್ಥವಾಗಿ ಗಣಹೋಮ ಹಾಗೂ ರುದ್ರಹೋಮಗಳು ದಯಾನಂದ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆದವು.

ನಂತರ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು, ಬೆಳ್ಳಿ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನ ಆವರಣದಲ್ಲಿ ಜರುಗಿದ ಬೆಳ್ಳಿ ರಥೋತ್ಸವಕ್ಕೆ ವಿವಿಧ ಕಲಾ-ಮೇಳಗಳು ಮೆರೆಗು ತಂದವು.

ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಅಜ್ಜಯ್ಯನಿಗೆ ಭಕ್ತಿ ಸಮರ್ಪಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾ ಡಿದ ಗದ್ದಿಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಅವರು, ಇದೇ ದಿನಾಂಕ 23ರ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದಲೇ ನಾಡಿನ ಅನೇಕ ಮಠಾಧೀಶರ ಸಾನ್ನಿಧ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಉಚಿತ ಹೊಲಿಗೆ ತರಬೇತಿ ಕೇಂದ್ರಗಳ ಉದ್ಘಾಟನೆ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಟ್ರಸ್ಟ್ ಕಮಿಟಿ ನಿರ್ದೇಶಕರಾದ ಕೊಟೇರ್ ಪ್ರಕಾಶ್, ಬಸವನಗೌಡ, ಹೊಸಳ್ಳಿ ಗದಿಗೆಪ್ಪ, ರಾಮನಗೌಡ್ರ ಗದಿಗೆಪ್ಪ ಮತ್ತು ಯುವ ಕಲಾವಿದ ಅಜಯ್ ಸೇರಿದಂತೆ ಗ್ರಾಮದ ಪ್ರಮುಖರು, ಭಕ್ತರು ಹಾಜರಿದ್ದರು.

ಪಾಲಿಕೋತ್ಸವ : ಸೋಮವಾರ ರಾತ್ರಿ ಅಜ್ಜಯ್ಯನ ಪಾಲಿಕೋತ್ಸವವು ಹೂವುಗಳಿಂದ ಅಲಂಕೃತಗೊಂಡ ವಾಹನದಲ್ಲಿ ಸಂಭ್ರಮದಿಂದ ನೆರವೇರಿತು. ನಂದಿಗುಡಿ ಶ್ರೀಗಳ ಪಾಲಿಕೋ ತ್ಸವಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಪಟಾಕಿ ಸಿಡಿತ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ, ಎಲ್ಲರ ಗಮನ ಸೆಳೆದವು.

error: Content is protected !!