ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ 32ನೇ ವಾರ್ಷಿಕ ಮಹಾಸಭೆ

ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ 32ನೇ ವಾರ್ಷಿಕ ಮಹಾಸಭೆ

ದಾವಣಗೆರೆ, ಆ. 19- ನಗರದ ಸಿಟಿ ಕೋ- ಆಪರೇಟಿವ್ ಬ್ಯಾಂಕ್‌ನ 32ನೇ ವಾರ್ಷಿಕ ಮಹಾಸಭೆಯು  ಸದ್ಯೋಜಾತ ಶಿವಾಚಾರ್ಯರ ಹಿರೇಮಠದಲ್ಲಿ ಕಳೆದ ವಾರ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಉಪಾಧ್ಯಕ್ಷ ನಿರಂಜನ ನಿಶಾನಿಮಠ್,  ಬ್ಯಾಂಕಿನ 2023-24ನೇ ಸಾಲಿನ ಪಕ್ಷಿನೋಟ ಮಂಡಿಸಿದರು.

ಹಿಂದಿನ ಸಭೆಯ ನಡಾವಳಿಗಳನ್ನು ವ್ಯವಸ್ಥಾಪಕ ಎನ್. ಮಂಜುನಾಥ್, 31.03.2024ರ ಲಾಭ – ನಷ್ಟ ಮತ್ತು ಅಢಾವೆ ಪತ್ರಿಕೆ ನಿವ್ವಳ ಲಾಭವನ್ನು ಹಿರಿಯ ನಿರ್ದೇಶಕ ಬಿ.ಹೆಚ್. ಪರಶುರಾಮಪ್ಪ ಮಂಡಿಸಿದರು.

2023-24ನೇ ಸಾಲಿನ ಹೆಚ್ಚುವರಿಯಾದ ಖರ್ಚುಗಳನ್ನು ಮತ್ತು 2024-25ನೇ ಸಾಲಿನ ಆಯವ್ಯಯವನ್ನು ವೃತ್ತಿಪರ ನಿರ್ದೇಶಕ ಡಾ. ಎಂ. ಸೋಮಶೇಖರಪ್ಪ ಮಂಡಿಸಿದರು. 

2024-25ನೇ ಸಾಲಿನ ಆಡಿಟ್ ವರದಿಯನ್ನು ಮತ್ತು ಅನುಪಾಲನಾ ವರದಿಯನ್ನು ವ್ಯವಸ್ಥಾಪಕರು ಹಾಗೂ 2024-25ನೇ ಸಾಲಿನ ಮೂವರು ಲೆಕ್ಕ ಪರಿಶೋಧಕ ಫರ್ಮ್‌ಗಳನ್ನು ಸಭೆಯಲ್ಲಿ ಉಪಾಧ್ಯಕ್ಷ ನಿರಂಜನ್ ನಿಶಾನಿಮಠ್ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿ ಬ್ಯಾಂಕಿನ ಸದಸ್ಯ ಬಿ.ಎಸ್. ಶಿವು ಅವರ ಪುತ್ರಿ ಅಮೃತ ವಿದ್ಯಾಲಯದ ವಿದ್ಯಾರ್ಥಿನಿ ಕು. ಲಿಖಿತಾ ಬಿ.ಎಸ್. ಅವರನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕೆ.ಎಂ. ರವಿ ಪ್ರಾರ್ಥಿಸಿದರು. ಹಿರಿಯ ನಿರ್ದೇಶಕ ಬಿ.ಹೆಚ್. ಪರಶುರಾಮಪ್ಪ ಸ್ವಾಗತಿಸಿದರು. ನಿರ್ದೇಶಕ ಎನ್.ವಿ. ಬಂಡಿವಾಡ ವಂದಿಸಿದರು.

ಸಭೆಯಲ್ಲಿ ನಿರ್ದೇಶಕರಾದ ಕೆ.ಎಸ್. ಮಹೇಶ್ವರಪ್ಪ, ಶ್ರೀಮತಿ ಪಂಕಜ ವೀರಯ್ಯ, ವಿಕಾಸ್ ಕುಮಾರ್, ಕೆ.ಆರ್. ರವೀಂದ್ರನಾಥ್, ಶ್ರೀಮತಿ ಆರ್. ಕೌಶಲ್ಯ, ಹೆಚ್.ವಿ. ವಿರೂಪಾಕ್ಷ, ಬಿ.ಜೆ. ಅಭಿಷೇಕ್, ಶ್ರೀಮತಿ ಲತಾ ಹಾಲೇಶ್,  ವೃತ್ತಿಪರ ನಿರ್ದೇಶಕರಾದ ಡಾ. ಎಂ. ಸೋಮಶೇಖರಪ್ಪ ಮತ್ತು ಎಂ.ಎಸ್. ಸುಮಂತ್ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!